ನವದೆಹಲಿ, 28 ಫೆಬ್ರವರಿ :
ಆ್ಯಂಕರ್:
ಇಂದಿನಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು, ಜಾರ್ಖಂಡ್ ಹಾಗೂ ಒಡಿಶಾಗೆ ನಾಲ್ಕು ದಿನಗಳ ಭೇಟಿ ನೀಡಲಿದ್ದಾರೆ. ಇಂದು ರಾಂಚಿಯಲ್ಲಿ ನಡೆಯಲಿರುವ ಸೆಂಟ್ರಲ್ ಯುನಿವರ್ಸಿಟಿ ಆಫ್ ಜಾರ್ಖಂಡ್ನ ಮೂರನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಒಡಿಶಾದ ರೈರಂಗ್ಪುರ್ನಲ್ಲಿ ಅತಿಥಿ ಗೃಹಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದೇ ವೇಳೆ ಅವರು, ಹಲವು ರಸ್ತೆ ಯೋಜನೆಗಳು ಹಾಗೂ ಏಕಲವ್ಯ ವಸತಿ ಶಾಲೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಿದ್ದಾರೆ.
