ನವದೆಹಲಿ, 8 ಫೆಬ್ರವರಿ :
ಆ್ಯಂಕರ್ : ತಮಿಳುನಾಡಿಗೆ ಹಣಕಾಸು ನೀಡಿಕೆಯಲ್ಲಿ ಅನ್ಯಾಯವಾಗಿದೆ ಎಂದು ಆಪಾದಿಸಿ ತಮಿಳುನಾಡಿನ ಡಿಎಂಕೆ ಮತ್ತು ಕಾಂಗ್ರೆಸ್ ಸಂಸದರು ಸಂಸತ್ ಸದನದ ಸಂಕಿರಣದಲ್ಲಿ ಇಂದು ಪ್ರತಿಭಟನೆ ನಡೆಸಿದರು. ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಭಟನೆ ನಿರತರು ತಮ್ಮ ಹಣಕಾಸು ನಿರ್ವಹಣೆಯ ವೈಪಲ್ಯವನ್ನು ಮರೆಮಾಚಲು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಆಪಾದಿಸಿದ್ದಾರೆ.
