ನವದೆಹಲಿ, 17 ಮಾರ್ಚ್ :
ನವ ಭಾರತ ಸಾಕ್ಷರತಾ ಕಾರ್ಯಕ್ರಮದ ಭಾಗವಾಗಿ ಕೇಂದ್ರ ಸರ್ಕಾರ ಇಂದು ೨೩ ರಾಜ್ಯಗಳಲ್ಲಿ ಅಡಿಪಾಯ ಸಾಕ್ಷರತೆ ಮತ್ತು ಸಂಖ್ಯಾ ಮೌಲ್ಯಮಾಪನ ಪರೀಕ್ಷೆ ಹಮ್ಮಿಕೊಂಡಿದೆ.
ಈ ಮಹತ್ವದ ರಾಷ್ಟ್ರವ್ಯಾಪಿ ಮೌಲ್ಯಮಾಪನಕ್ಕೆ ಸುಮಾರು ೩೭ ಲಕ್ಷ ಕಲಿಕಾ ಮಂದಿ ಹಾಜರಾಗಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ. ಭಾಗವಹಿಸುವ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಎಫ್ಎಲ್ಎನ್ಎಟಿ ನಡೆಯಲಿದೆ. ಮೌಲ್ಯಮಾಪನ ಓದುವುದು, ಬರೆಯುವುದು ಮತ್ತು ಸಂಖ್ಯಾಶಾಸ್ತ್ರ ಸೇರಿ ಮೂರು ವಿಷಯಗಳನ್ನು ಒಳಗೊಂಡಿದೆ. ಪ್ರತಿಯೊಂದೂ ವಿಷಯ ೫೦ ಅಂಕಗಳನ್ನು ಹೊಂದಿದ್ದು, ಒಟ್ಟು ೧೫೦ ಅಂಕಗಳ ಪರೀಕ್ಷೆಯಾಗಿದೆ. ಬಹುಭಾಷತೆಯನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ರ ಅನುಗುಣವಾಗಿ ಪರೀಕ್ಷೆಯನ್ನು ಕಲಿಕಾ ಮಂದಿಯ ಪ್ರಾದೇಶಿಕ ಭಾಷೆಯಲ್ಲಿ ನಡೆಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
