ಅಜಂಗಢ್, 10 ಮಾರ್ಚ್ (ಹಿ.ಸ):ಆ್ಯಂಕರ್:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಉತ್ತರ ಪ್ರದೇಶ ಭೇಟಿಗಾಗಿ ನಿನ್ನೆ ವಾರಾಣಸಿ ತಲುಪಿದ್ದಾರೆ. ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷ ಅವರನ್ನು ಮೂರನೇ ಬಾರಿಗೆ ಲೋಕಸಭಾ ಅಭ್ಯರ್ಥಿಯನ್ನಾಗಿ ಪ್ರಕಟಿಸಿದ ನಂತರ ವಾರಣಾಸಿಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ.
ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಕಾಶಿ ವಿಶ್ವನಾಥ ಧಾಮದವರೆಗೆ ನಿರ್ಮಿಸಲಾದ ಒಟ್ಟು ೩೨ ಸ್ವಾಗತ ದ್ವಾರಗಳಲ್ಲಿ ಸ್ಥಳೀಯ ಜನತೆ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪುಷ್ಪವೃಷ್ಟಿಯೊಂದಿಗೆ ಪ್ರಧಾನಿಯವರನ್ನು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಧಾಮಕ್ಕೆ ಆಗಮಿಸಿ ಕಾಶಿ ವಿಶ್ವನಾಥನನಿಗೆ ಪೂಜೆ ಸಲ್ಲಿಸಿದರು. ವಾರಣಾಸಿಯ ಬಿಎಲ್ಡಬ್ಲ್ಯೂ ಅತಿಥಿ ಗೃಹದಲ್ಲಿ ರಾತ್ರಿ ತಂಗಿದ್ದ ಪ್ರಧಾನಿಯವರು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ಪಡೆದು ಕೊಂಡರು.
ಇಂದು ಬೆಳಗ್ಗೆ ವಾರಣಾಸಿಯಿಂದ ಅಜಂಗಢಕ್ಕೆ ತೆರಳಲಿರುವ ಪ್ರಧಾನಿ ಅಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಇದರೊಂದಿಗೆ ದೇಶ ಮತ್ತು ರಾಜ್ಯಕ್ಕೆ ೪೨ ಸಾವಿರ ಕೋಟಿ ರೂಪಾಯಿ ವೆಚ್ಚದ ಗಳ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನೆರವೇರಿಸಲಿದ್ದಾರೆ. ಅವರು ಅಜಂಗಢ್ ಜಿಲ್ಲೆಯ ಏರ್ಸ್ಟ್ರಿಪ್ ಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಸುಹೇಲ್ದೇವ್ ಸ್ಟೇಟ್ ಯೂನಿವರ್ಸಿಟಿಗೆ ಭೇಟಿ ನೀಡಲಿದ್ದಾರೆ.
