ದೆಹಲಿ,18 ಅಕ್ಟೋಬರ್ :
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ತಿಂಗಳ ೨೯ ರ ಭಾನುವಾರದಂದು ಬೆಳಗ್ಗೆ ೧೧ ಗಂಟೆಗೆ ಆಕಾಶವಾಣಿಯ ತಮ್ಮ ಜನಪ್ರಿಯ ಕಾರ್ಯಕ್ರಮ ’ಮನ್ ಕಿ ಬಾತ್’ ನಲ್ಲಿ ದೇಶ ಹಾಗೂ ವಿದೇಶದಲ್ಲಿರುವ ಭಾರತೀಯರೊಂದಿಗೆ ತಮ್ಮ ಚಿಂತನೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಮಾಸಿಕ ಬಾನುಲಿ ಕಾರ್ಯಕ್ರಮದ ೧೦೬ನೇ ಸಂಚಿಕೆ ಇದಾಗಿದೆ. ಜನರು, ತಮ್ಮ ಅಭಿಪ್ರಾಯಗಳನ್ನು ನಮೋ ಆಪ್ ಅಥವಾ ಮೈ ಗೌ ಮುಕ್ತ ವೇದಿಕೆಯಲ್ಲಿ ಹಂಚಿಕೊಳ್ಳಬಹುದು. ಟೊಲ್ ಫ್ರೀ ಸಂಖ್ಯೆ ೧೮೦೦-೧೧-೭೮೦೦ ಗೆ ಕರೆ ಮಾಡಿ ತಮ್ಮ ಸಂದೇಶವನ್ನು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ರೆಕಾರ್ಡ್ ಮಾಡಬಹದು.
