ಆಯೋಧ್ಯೆ
ಆಯೋಧ್ಯೆ ರಾಮ ಮಂದಿರಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದಿನ 24 ಗಂಟೆ ರಾಮ ಮಂದಿರ ಭಕ್ತರ ದರ್ಶನಕ್ಕೆ ತೆರೆಯಲು ಸೂಚನೆ ನೀಡಿದ್ದಾರೆ. ಈ ಮೂರು ದಿನ 24 ಗಂಟೆಯೂ ರಾಮ ಮಂದಿರ ಭಕ್ತರಿಗೆ ದರ್ಶನ ನೀಡಲಿದೆ .
ಆಯೋಧ್ಯೆ ರಾಮ ಮಂದಿರ ದರ್ಶನಕ್ಕೆ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಉತ್ತರ ಪ್ರದೇಶ ಸರ್ಕಾರ ನೋಡಿಕೊಳ್ಳುತ್ತಿದೆ. ಭಕ್ತರು ಸುಗಮವಾಗಿ ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ. ಇದೀಗ ಶಾಲಾ ಕಾಲೇಜುಗಳು ಬೇಸಿಗೆ ರಜೆಯತ್ತ ದಾಪುಗಾಲಿಡುತ್ತಿದೆ. ಹೀಗಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಇದರ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ಸೂಚನೆ ನೀಡಿದ್ದಾರೆ. ದಿನದ 24 ಗಂಟೆ ರಾಮ ಮಂದಿರ ತೆರೆಯಲು ಸೂಚನೆ ನೀಡಿದ್ದಾರೆ. ನವರಾತ್ರಿಯ ಅಂತಿಮ ಮೂರು ದಿನದಲ್ಲಿ 24 ಗಂಟೆಯೂ ರಾಮ ಮಂದಿರ ಭಕ್ತರ ದರ್ಶನಕ್ಕೆ ಅವಕಾಶ ನೀಡಲು ಸೂಚಿಸಿದ್ದಾರೆ.
ಎಪ್ರಿಲ್ ತಿಂಗಳ ನವರಾತ್ರಿಯ ಅಷ್ಠಮಿ, ನವಮಿ ಹಾಗೂ ದಶಮಿಯ ಮೂರು ದಿನ 24 ಗಂಟೆ ರಾಮ ಮಂದಿರ ಭಕ್ತರಿಗೆ ದರ್ಶನ ನೀಡಲಿದೆ. ಈ ಮೂರು ದಿನ ವಿಶೇಷ ಪೂಜೆಗಳು ನಡೆಯಲಿದೆ.
24 ಗಂಟೆ ಭಕ್ತರು ರಾಮ ಮಂದಿರ ದರ್ಶನ ಪಡೆಯಲು ಅಧಿಕಾರಿಗಳು ಎಲ್ಲಾ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಯೋಗಿ ಸೂಚಿಸಿದ್ದರೆ. ಭಕ್ತರಿಗೆ ಎಲೆಕ್ಟ್ರಿಕ್ ಬಸ್ ಸೇವೆ ನೀಡಲು ಸೂಚನೆ ನೀಡಲಾಗಿದೆ.
