ನವದೆಹಲಿ, 9 ಫೆಬ್ರವರಿ :
ಆ್ಯಂಕರ್ : ದೇಶದ ಆಗ್ನೇಯಾ ಭಾಗದಲ್ಲಿ ದಟ್ಟೈಸುತ್ತಿರುವ ಮೋಡಗಳಿಂದಾಗಿ ನಾಳೆಯಿಂದ ೧೧ನೇ ತಾರೀಖಿನವರೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ನಿರೀಕ್ಷೆಯಿದೆ. ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಗಳಲ್ಲಿ ನಾಳೆವರೆಗೆ ಹಾಗೂ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗಳ ಆಯ್ದ ಕೆಲವು ಪ್ರದೇಶಗಳಲ್ಲಿ ೧೦ನೇ ತಾರೀಖಿನವರೆಗೆ ದಟ್ಟವಾದ ಮಂಜು ಕವಿದ ವಾತಾವರಣ ಮುಂದುವರೆಯಲಿದೆ.
ವಾಯವ್ಯ ಭಾರತದ ಮೈದಾನ ಪ್ರದೇಶಗಳಲ್ಲಿ ಮುಂದಿನ ೩ ದಿನಗಳ ಕಾಲ ಗಂಟೆಗೆ ೧೫ ರಿಂದ ೨೫ ಕಿಲೋಮೀಟರ್ ವೇಗದಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸಲಿದೆ. ಪೂರ್ವ ಮತ್ತು ಮಧ್ಯಭಾರತದ ಅನೇಕ ಸ್ಥಳಗಳಲ್ಲಿ ಇನ್ನು ೨-೩ ದಿನಗಳಲ್ಲಿ ಕನಿಷ್ಠ ತಾಪಮಾನ ೨ ರಿಂದ ೩ ಡಿಗ್ರಿಯಷ್ಟು ಕಡಿಮೆಯಾಗಲಿದೆ. ನಂತರ ಯಾವುದೇ ಬದಲಾವಣೆ ಇರುವುದಿಲ್ಲ. ದೆಹಲಿಯ ವಾಯು ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದ್ದು, ಇಂದು ಬೆಳಿಗ್ಗೆ ೭ ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ ೧೬೫ ಇತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
