ಬೆಂಗಳೂರು, 9 ಫೆಬ್ರವರಿ :
ಆ್ಯಂಕರ್: ‘ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಖ್ಯಾತಿಯ ರಿಷಿ ಇದೀಗ ತೆಲುಗಿನಲ್ಲಿ ಅದೃಷ್ಟ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ಸ್ಟಾರ್ ನಟ ಬಾಲಯ್ಯ ಅವರ 109ನೇ ಸಿನಿಮಾದಲ್ಲಿ ಕನ್ನಡದ ಪ್ರತಿಭಾನ್ವಿತ ನಟ ರಿಷಿ ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಾಯಕ ನಾಯಕ ಆಗಿ ಗೆದ್ದಿದ್ದ ರಿಷಿ, ಬಾಲಯ್ಯ ಮುಂದೆ ಖಳನಾಯಕ ಆಗಿ ಅಬ್ಬರಿಸಲಿದ್ದಾರೆ.
ನಟ ರಿಷಿ ಅವರು ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಬಾಲಕೃಷ್ಣ ಅವರ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದಲ್ಲಿ ಬಾಲಯ್ಯ ಅವರ 109ನೇ ಸಿನಿಮಾ ಮೂಡಿ ಬರುತ್ತಿದೆ.
ಬಾಲಯ್ಯ ಮುಂದೆ ರಿಷಿ ಖಳನಾಯಕ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಷ್ಟೇ ಅಲ್ಲ, ‘ಅನಿಮಲ್’ ಚಿತ್ರದ ಖಡಕ್ ಖಳನಾಯಕ ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಬಿ ಡಿಯೋಲ್- ರಿಷಿ ಇಬ್ಬರೂ ಈ ಚಿತ್ರದಲ್ಲಿ ಖಳನಾಯಕರಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ರಿಷಿಗೆ ಬಾಬಿ ಡಿಯೋಲ್ ಚಿಕ್ಕಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.
