ನವದೆಹಲಿ, 13 ಫೆಬ್ರವರಿ :
ಆ್ಯಂಕರ್:
ಪೂರ್ವ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ನಲ್ಲಿ ಮುಂದಿನ 3 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಈ ಭಾಗದ ಜನರನ್ನು ಮನೆಯಲ್ಲಿಯೇ ಇರುವಂತೆ ಕೇಳಿಕೊಂಡಿದೆ, ಗುಡುಗು, ಮಿಂಚು, ಆಲಿಕಲ್ಲಿನಿಂತ ಕೂಡಿದ ಅಕಾಲಿಕ ಮಳೆ ಇದಾಗಿರಲಿದೆ. ವಿದರ್ಭಾದಲ್ಲಿ ಕಡಿಮೆ ಉಷ್ಣವಲಯದಲ್ಲಿ ಚಂಡಮಾರುತ ಉಂಟಾಗುತ್ತಿದ್ದು ಮರಾಠವಾಡದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇಂದು ವಿದರ್ಭಾ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಮಳೆಯಾಗಲಿದೆ. ಫೆಬ್ರವರಿ 13-15ರ ವೇಳೆ ಒಡಿಶಾದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಲ್ಲಿ ವಾಯುವ್ಯ ಭಾರತದಲ್ಲಿ ಕನಿಷ್ಠ ತಾಪಮಾನದಲ್ಲಿ 2-4 ಡಿಗ್ರಿ ಸೆಲ್ಸಿಯಸ್ನಷ್ಟು ರಷ್ಟು ಕ್ರಮೇಣ ಏರಿಕೆಯಾಗುವ ಸಾಧ್ಯತೆಯಿದೆ.
ಕರ್ನಾಟಕ ಹವಾಮಾನ ವರದಿ ಕರ್ನಾಟಕದ ಬಹುತೇಕ ಕಡೆ ಒಣಹವೆ ಮುಂದುವರೆದಿದೆ, ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆ ಗರಿಷ್ಠ ಉಷ್ಣಾಂಶ ಹೆಚ್ಚಾಗಿದೆ. ಚಿಕ್ಕನಹಳ್ಳಿಯಲ್ಲಿ 12.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದೆ.
