ಗೋಥೆನ್ ಬರ್ಗ್, 13 ಫೆಬ್ರವರಿ :
ಆ್ಯಂಕರ್:
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅಂತಾರೆ. ಆದ್ರೆ ಅಗ್ನಿಗೆ ಕ್ಷಣ ಸಾಕು. ಎಲ್ಲವನ್ನೂ ನುಂಗಿ ಹಾಕಲು. ಭಸ್ಮ ಮಾಡಲು. ಸ್ವೀಡನ್ನಲ್ಲೂ ಇಂಥದ್ದೇ ಒಂದು ಅಗ್ನಿ ದುರಂತ ಎಲ್ಲವನ್ನೂ ಭಸ್ಮ ಮಾಡಿದೆ.
ಗೋಥೆನ್ ಬರ್ಗ್ ನಗರದಲ್ಲಿರುವ ಸ್ವೀಡನ್ ನ ಅತಿದೊಡ್ಡ ಮನರಂಜನೆ ಉದ್ಯಾನವನ (ಅಮ್ಯೂಸ್ ಮೆಂಟ್ ಪಾರ್ಕ್ )ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮನರಂಜನೆ ಉದ್ಯಾನವನವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ನಿರ್ಮಾಣ ಹಂತದಲ್ಲಿರುವ ವಾಟರ್ ಪಾರ್ಕ್ನಲ್ಲಿ ಬೆಂಕಿ ಕಾಣಿಸಿಕೊಂಡು, ಬಳಿಕ ಇಡೀ ಕಟ್ಟಡವೇ ಹೊತ್ತಿ ಉರಿದಿದೆ.
ಬೆಂಕಿಯ ಕೆನ್ನಾಲಿಗೆಗೆ ಇಡೀ ಮನರಂಜನೆ ಉದ್ಯಾನವನ ಧಗಧಗಿಸಿದೆ. ತಕ್ಷಣ ಅಲ್ಲಿದ್ದವರನ್ನ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುಮಾರು 55 ಮಂದಿಗೆ ಗಾಯಗಳಾಗಿವೆ. ಅದರಲ್ಲಿ 12 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಒಟ್ಟಾರೆ ಕೋಟಿ ಕೋಟಿ ಮೌಲ್ಯದ ಅಮ್ಯೂಸ್ಮೆಂಟ್ ಪಾರ್ಕ್ ಅಗ್ನಿಗೆ ಸಂಪೂರ್ಣ ಆಹುತಿಯಾಗಿದೆ. ಈ ಅವಘಡಕ್ಕೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ತನಿಖೆ ಶುರುಮಾಡಿದ್ದಾರೆ. ಆದ್ರೆ. ಈ ಬೇಸಿಗೆಯಲ್ಲಿ ಆರಂಭವಾಗಬೇಕಿದ್ದ ಅಮ್ಯೂಸ್ಮೆಂಟ್ ಪಾರ್ಕ್, ಅದಕ್ಕೂ ಮೊದಲೇ ಭಸ್ಮವಾಗಿದ್ದು ನಿಜಕ್ಕೂ ದುರಂತ.
