ನವದೆಹಲಿ, 5 ಮಾರ್ಚ್
ಆ್ಯಂಕರ್:ನೌಕಾ ಪಡೆಯ ಚೊಚ್ಚಲ ಕಮಾಂಡರ್ ಗಳ ಸಮ್ಮೇಳನ ಇಂದು ಆರಂಭವಾಗಲಿದೆ. ಮೊದಲ ಹಂತದ ಸಮ್ಮೇಳನ ಸಮುದ್ರ ಮಾರ್ಗದಲ್ಲಿ ನಡೆಯುತ್ತಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಮೂರು ದಿನಗಳ ಸಮ್ಮೇಳನದಲ್ಲಿ ರಕ್ಷಣಾ ವಿಭಾಗದ ಮುಖ್ಯಸ್ಥರು, ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರು ಸಹ ಭಾಗಿಯಾಗಲಿದ್ದಾರೆ.
