ಬೆಂಗಳೂರು, 5 ಮಾರ್ಚ್ ಆ್ಯಂಕರ್:
ಟಾಲಿವುಡ್ ನಟ ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮೀ ಅವರು ‘ಆದಿಪರ್ವ’ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ಒಟ್ಟು 5 ಭಾಷೆಗಳಲ್ಲಿ ಮೂಡಿಬರುತ್ತಿದೆ. ಸಂಜೀವ್ ಕುಮಾರ್ ಮೆಗೋಟಿ ಅವರು ‘ಆದಿಪರ್ವ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಅನ್ವಿಕಾ ಆರ್ಟ್ಸ್’ ಹಾಗೂ ‘ಅಮೆರಿಕಾ ಇಂಡಿಯಾ ಎಂಟರ್ಟೈನ್ಮೆಂಟ್’ (ಎ.ಐ ಎಂಟರ್ಟೈನ್ಮೆಂಟ್ ) ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಲಿದೆ.
ಮಂಚು ಲಕ್ಷ್ಮೀ ಮಾತ್ರವಲ್ಲದೇ ಎಸ್ತರ್, ಸತ್ಯಪ್ರಕಾಶ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ, ತಮಿಳು, ಮರಾಠಿ, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ನಟ-ನಟಿಯರು ‘ಆದಿಪರ್ವ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡಿಗ ಹರೀಶ್ ಅವರು ಈ ಚಿತ್ರಕ್ಕೆ ಛಾಯಗ್ರಹಣ ಮಾಡಿದ್ದಾರೆ. ರಾಮ್ ಸುಧಿ (ಸುಧೀಂದ್ರ) ಅವರು ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ.
ಏಪ್ರಿಲ್ ತಿಂಗಳ 2ನೇ ವಾರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಆದಿಪರ್ವ’ ಚಿತ್ರ ಬಿಡುಗಡೆಯಾಗಲಿದೆ.
