ನವದೆಹಲಿ,
ಆ್ಯಂಕರ್ :ಮೂರು ತಿಂಗಳ ಹಿಂದೆ ಏಡನ್ ಕೊಲ್ಲಿಯಿಂದ ಅಪಹರಣಕ್ಕೊಳಗಾಗಿದ್ದ ಎಂವಿ ರೂಯೆನ್ ಹಡಗನ್ನು ಭಾರತೀಯ ನೌಕಾಪಡೆಯು ರಕ್ಷಿಸಿತ್ತು. ಹಡಗಿನಲ್ಲಿದ್ದ 17 ಸಿಬ್ಬಂದಿಯನ್ನು ನೌಕಾಪಡೆಯ ಮಾರ್ಕೋಸ್ ಕಮಾಂಡೋಸ್ ರಕ್ಷಿಸಿದರು. ಇವರಲ್ಲಿ ಏಳು ಮಂದಿ ಬಲ್ಗೇರಿಯಾದ ಪ್ರಜೆಗಳಿದ್ದರು. ಭಾರತೀಯ ನೌಕಾಪಡೆಯ ಈ ಕೆಲಸಕ್ಕೆ ಬಲ್ಗೇರಿಯಾ ಸರ್ಕಾರವು ಭಾರತೀಯ ನೌಕಾಪಡೆಯ ಈ ಶೌರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿತ್ತು.
ಈ ಬಗ್ಗೆ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅದರ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಪ್ರಮುಖ ಕ್ರಮ ತೆಗೆದುಕೊಂಡು ಭಾರತೀಯ ನೌಕಾಪಡೆ ಹಾಗೂ ಪ್ರಧಾನಿ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
ಇದೀಗ ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ನೌಕಾಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತದ ಬದ್ಧತೆವಾಗಿದೆ ಎಂದು ಹೇಳಿದ್ದಾರೆ.
