ಲಖನೌ,17 ಫೆಬ್ರವರಿ :
ಆ್ಯಂಕರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶ ತಲುಪಿದೆ. ಆದರೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾದ ಪ್ರಿಯಾಂಕ ಗಾಂಧಿಯವರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಯುಪಿ ಬಿಜೆಪಿ, ಇದು ಸಹೋದರ, ಸಹೋದರಿ ನಡುವಿನ ವೈಮನಸು ಸೂಚಿಸುತ್ತದೆ ಎಂದು ಆರೋಪಿಸಿದೆ.
‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಉತ್ತರ ಪ್ರದೇಶದ ಚಂದೌಲಿಗೆ ತಲುಪಿದ್ದು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಯುಪಿ ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಆದರೆ ಈ ಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದು ಅನಾರೋಗ್ಯದ ಕಾರಣ ನಾನು ಆಸ್ಪತ್ರೆಗೆ ದಾಖಲು ಆಗಿದ್ದೇನೆ. ಶೀಘ್ರದಲ್ಲೇ ಅನಾರೋಗ್ಯದಿಂದ ಚೇರಿಸಿಕೊಂಡು ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಯಾತ್ರೆಗಾಗಿ ಎಲ್ಲ ಕಾರ್ಯಗಳನ್ನು ವ್ಯವಸ್ಥಿತವಾಗಿ ಮಾಡಿರುವ ಯುಪಿಯ ಕಾಂಗ್ರೆಸ್ ಮುಖಂಡರಿಗೆ, ಕಾರ್ಯಕರ್ತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
