ನವದೆಹಲಿ, 17 ಫೆಬ್ರವರಿ : ಆ್ಯಂಕರ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ಆಗ್ತಿವೆ. ಅದರಲ್ಲೂ ದೆಹಲಿ ಅಬಕಾರಿ ನೀತಿ ವಿಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನಡುವೆ ಸಮರ ಮುಂದುವರೆದೇ ಇದೆ. ಈ ನಡುವೆ ಇಂದು ವಿಶ್ವಾಸ ನಿರ್ಣಯ ಮಂಡಿಸಲು ಮುಖ್ಯಮಂತ್ರಿ ಮುಂದಾಗಿದ್ದು ಮಹತ್ವ ಪಡೆದಿದೆ.
ಕಳೆದ ಹಲವು ಸಮಯದಿಂದ ದೆಹಲಿ ಅಬಕಾರಿ ನೀತಿ ಹಗರಣದ ವಿಚಾರವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ವರ್ಸಸ್ ಕೇಂದ್ರ ತನಿಖಾ ಸಂಸ್ಥೆಗಳ ನಡುವೆ ಯುದ್ಧ ನಡೀತಾನೇ ಇದೆ. ಈ ಪ್ರಕರಣದಲ್ಲಿ ಆಪ್ ಸರ್ಕಾರದ ಘಟಾನುಘಟಿ ನಾಯಕರು ಜೈಲುಪಾಲಾಗಿದ್ದಾರೆ. ಈ ನಡುವೆ ಲೋಕಸಮರ ಸಮೀಪಿಸುತ್ತಿರುವಾಗಲೇ ಕೇಜ್ರೀವಾಲ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
