ದೆಹಲಿ, 27 ಡಿಸೆಂಬರ್(ಹಿ.ಸ):
ಆ್ಯಂಕರ್ :
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮತ್ತು ನಾಡಿದ್ದು ನವದೆಹಲಿಯಲ್ಲಿ ನಡೆಯಲಿರುವ ಮುಖ್ಯ ಕಾರ್ಯದರ್ಶಿಗಳ ಮೂರನೇ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಇಂತಹ ಮೂರನೇ ಸಮ್ಮೇಳನವಾಗಿದೆ, ಈ ಮೊದಲು ೨೦೨೨ರಲ್ಲಿ ಧರ್ಮಶಾಲಾದಲ್ಲಿ ಮೊದಲ ಹಾಗೂ ಕಳೆದ ವರ್ಷದ ಜನವರಿಯಲ್ಲಿ ಎರಡನೇ ಸಮ್ಮೇಳನ ದೆಹಲಿಯಲ್ಲಿಯೇ ನಡೆದಿತ್ತು. ಸಹಕಾರಿ ಒಕ್ಕೂಟದ ತತ್ವವನ್ನು ಕಾರ್ಯರೂಪಕ್ಕೆ ತರುವ ಪ್ರಧಾನಮಂತ್ರಿಯವರ ದೂರದೃಷ್ಟಿಯಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿ ಆಡಳಿತ ಮತ್ತು ಪಾಲುದಾರಿಕೆಯನ್ನು ಉತ್ತೇಜಿಸಲು ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ನಾಳೆಯಿಂದ ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ೨೦೦ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಸರ್ಕಾರದ ಮಧ್ಯಸ್ಥಿಕೆಗಳ ವಿತರಣಾ ಕಾರ್ಯವಿಧಾನಗಳನ್ನು ಬಲಪಡಿಸುವ ಮೂಲಕ ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಉತ್ತಮ ಗುಣಮಟ್ಟದ ಜೀವನ ರೂಪಿಸಲು ಸಹಕಾರಿ ವ್ಯವಸ್ಥೆಗೆ ಇದು ಅಡಿಪಾಯ ಹಾಕುತ್ತದೆ. ಈ ವರ್ಷದ ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನದ ಪ್ರಮುಖ ಕೇಂದ್ರ ಬಿಂದು ಸುಗಮ ಜೀವನ” ಎಂಬುದಾಗಿರುತ್ತದೆ. ಸಾಮಾನ್ಯ ಅಭಿವೃದ್ಧಿ ಕಾರ್ಯಸೂಚಿಯ ವಿಕಸನ ಮತ್ತು ಅನುಷ್ಠಾನಕ್ಕೆ ಈ ಸಮ್ಮೇಳನ ಒತ್ತು ನೀಡಲಿದೆ.
ಹಿಂದೂಸ್ತಾನ್ ಸಮಾಚಾರ್
