ಉತ್ತರಕಾಶಿ , 22ನವೆಂಬರ್ (ಹಿ.ಸ):
ಆ್ಯಂಕರ್ :
ಉತ್ತರಕಾಶಿ ಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು 10 ದಿನಗಳು ಕಳೆದಿವೆ. ನಲವತ್ತೊಂದು ಕಾರ್ಮಿಕರನ್ನು ಮುಂದಿನ ಎರಡು ದಿನಗಳಲ್ಲಿ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಹೊರತೆಗೆಯಬಹುದು. ಆದರೆ ಅದೂ ಕೂಡ ಕೆಲಸ ಮಾಡದಿದ್ದರೆ ಕಾರ್ಮಿಕರ ರಕ್ಷಣೆಗೆ 15ದಿನವರೆಗೂ ಹಿಡಿಯಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನವೆಂಬರ್ 12ರಂದು ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣಹಂತದಲ್ಲಿರುವ ಸುರಂಗದ ಒಂದು ಭಾಗ ಕುಸಿದಿತ್ತು, 41 ಮಂದಿ ಕಾರ್ಮಿಕರು ಇದೀಗ ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ನಿರ್ಮಿತ ಆಗರ್ ಡ್ರಿಲ್ಲಿಂಗ್ ಯಂತ್ರವು ಇದೀಗ ಉತ್ತಮ ಆಯ್ಕೆಯಾಗಿದೆ ಮತ್ತು 2.5 ದಿನಗಳಲ್ಲಿ ಕಾರ್ಮಿಕರು ಹೊರಬರಬಹುದು.
ಕಳೆದ ಶುಕ್ರವಾರ ಮಧ್ಯಾಹ್ನ ಆಗರ್ ಯಂತ್ರವು ಗಟ್ಟಿಯಾದ ಬಂಡೆಯೊಂದರ ಬಳಿ ಬಂದಿದ್ದು, ಕಂಪನ ಸಂಭವಿಸಿತ್ತು ಪ್ರಚೋದಿಸಿತು, ಸುರಕ್ಷತೆಯ ಕಾರಣದಿಂದ ಕಾರ್ಯಾಚರಣೆಯನ್ನು ತಡೆಹಿಡಿಯಲಾಗಿತ್ತು.
ಐದು ಇತರ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ, ಆದರೆ ಅವು 12-15 ದಿನಗಳವರೆಗೆ ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 6 ಇಂಚಿನ ಪೈಪ್ ಮೂಲಕ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಚಪಾತಿ, ವೆಜ್ ಪಲಾವ್, ಮಟರ್ ಪನೀರ್ನಂತಹ ಬೇಯಿಸಿದ ಆಹಾರ ಪದಾರ್ಥಗಳನ್ನು ರವಾನಿಸಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
