ನವದೆಹಲಿ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತೀಯ ಮೂಲದ ಹಿರಿಯ ಬ್ರಿಟಿಷ್ ಕೈಗಾರಿಕೋದ್ಯಮಿ ಲಾರ್ಡ್ ಸ್ವರಾಜ್ ಪಾಲ್ (94) ಗುರುವಾರ ಸಂಜೆ ಲಂಡನ್‌ನ ಆಸ್ಪತ್ರೆಯಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲಾರ್ಡ್ ಸ್ವರಾಜ್ ಪಾಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಳವಾದ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮೋದಿ, ಸ್ವರಾಜ್ ಪಾಲ್ ಜಿ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಬ್ರಿಟನ್‌ನಲ್ಲಿ ಕೈಗಾರಿಕೆ, ಲೋಕೋಪಕಾರ ಮತ್ತು ಸಾರ್ವಜನಿಕ ಸೇವೆಗೆ ಅವರ ಕೊಡುಗೆ ಹಾಗೂ ಭಾರತದೊಂದಿಗಿನ ನಿಕಟ ಸಂಬಂಧಕ್ಕೆ ಅವರ ಅಚಲ ಬೆಂಬಲ ಯಾವಾಗಲೂ ಸ್ಮರಣೀಯವಾಗಿರುತ್ತದೆ. ಅವರೊಂದಿಗಿನ ಅನೇಕ ಭೇಟಿಗಳನ್ನು ನಾನು ಕಳೆದು ಕೊಂಡಿದ್ದೆನೆ.
ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪಗಳು ಎಂದು ತಿಳಿಸಿದ್ದಾರೆ.
1931ರ ಫೆಬ್ರವರಿ 18ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದ ಸ್ವರಾಜ್ ಪಾಲ್, ಯುಕೆ ಮೂಲದ ಕ್ಯಾಪರೊ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಸ್ಥಾಪಕರಾಗಿದ್ದರು. 1960ರ ದಶಕದಲ್ಲಿ ತಮ್ಮ ಕಿರಿಯ ಮಗಳು ಅಂಬಿಕಾ ಅವರ ಕ್ಯಾನ್ಸರ್ ಚಿಕಿತ್ಸೆಗೆ ಯುಕೆಗೆ ತೆರಳಿದ ಅವರು, ಮಗಳ ಅಕಾಲಿಕ ನಿಧನದ ಬಳಿಕ ಅಂಬಿಕಾ ಪಾಲ್ ಫೌಂಡೇಶನ್‌ನ್ನು ಸ್ಥಾಪಿಸಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಮಕ್ಕಳ ಕಲ್ಯಾಣಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
