ದೆಹಲಿ, 6 ಜನವರಿ(ಹಿ.ಸ):
ಆ್ಯಂಕರ್ :
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ’ಪರೀಕ್ಷಾ ಪೇ ಚರ್ಚಾ-೨೦೨೪’ ಸಂವಾದ ಕಾರ್ಯಕ್ರಮ ಈ ತಿಂಗಳ ೨೯ ರಂದು ನಡೆಯಲಿದೆ. ಪರೀಕ್ಷಾ ಸಂದರ್ಭದ ಆತಂಕ, ಭಯ ಕುರಿತಂತೆ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳಲು My Gov Portal ನಲ್ಲಿ ಇದುವರೆಗೆ ಒಂದು ಕೋಟಿಗೂ ಅಧಿಕ ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಈ ವರ್ಷದ ’ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರಧಾನಿಯವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಪರೀಕ್ಷಾ ಪೇ ಚರ್ಚಾz ೭ನೇ ಆವೃತ್ತಿಯು ದೆಹಲಿಯ ಭಾರತ್ ಮಂಟಪಂ ನಲ್ಲಿ ನಡೆಯಲಿದೆ.My Gov Portal ನಲ್ಲಿ ಆನ್ಲೈನ್ MCQ ಸ್ಪರ್ಧೆ ಈಗಾಗಲೇ ಲೈವ್ನಲ್ಲಿದೆ. ೬ನೇ ತರಗತಿಯಿಂದ ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳು, ಬೋಧಕ ವರ್ಗ ಮತ್ತು ಪಾಲಕರು ಇದರಲ್ಲಿ ಈ ತಿಂಗಳ ೧೨ರವರೆಗೆ ಪಾಲ್ಗೊಳ್ಳಬಹುದಾಗಿದೆ. ಶಾಲಾಮಟ್ಟದಲ್ಲಿ ಯುವದಿನದ ಸಂದರ್ಭದಲ್ಲಿ ಈ ತಿಂಗಳ ೧೨ರಿಂದ ೨೩ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನೇತಾಜಿ ಸುಬಾಷ್ಚಂದ್ರ ಬೋಸ್ ಜಯಂತಿ ಅಂಗವಾಗಿ ೨೩ರಂದು ದೇಶದ ೫೦೦ ಜಿಲ್ಲೆಗಳಲ್ಲಿ ಪೇಟಿಂಗ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
Gov Portal ನಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಆಧರಿಸಿ ಒಟ್ಟು ೨ ಸಾವಿರದ ೫೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಹಾಗೂ ಅವರಿಗೆ ವಿಶೇಷ ಪರೀಕ್ಷಾ ಪೇ ಚರ್ಚಾ ಕಿಟ್ ನೀಡಲಾಗುವುದು. ಇದು ಹಿಂದಿ ಮತ್ತು ಇಂಗ್ಲೀಷ್ನಲ್ಲಿ ಪ್ರಧಾನಮಂತ್ರಿಯವರು ಬರೆದಿರುವ Exam warriors ಪುಸ್ತಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಪರೀಕ್ಷಾ ಪೇ ಚರ್ಚಾ, ಯುವಜನತೆಗೆ ಒತ್ತಡ ಮುಕ್ತ ಪರಿಸರ ಕಲ್ಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಿರುವ Exam warriors ನ ಭಾಗವಾಗಿದೆ.
ಹಿಂದೂಸ್ತಾನ್ ಸಮಾಚಾರ್
