ನವದೆಹಲಿ, 10 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಜಾತಿ ಆಧಾರಿತ ಕಿರುಕುಳದಿಂದ ಸಾವನ್ನಪ್ಪಿದ ಹರಿಯಾಣ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಇಡೀ ರಾಷ್ಟ್ರವನ್ನೇ ಬೆಚ್ಚಿಬೀಳಿಸಿದೆ. ದೇಶದಾದ್ಯಂತ ದಲಿತರ ವಿರುದ್ಧ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ ಮತ್ತು ಹಿಂಸಾಚಾರದ ಚಕ್ರ ಭಯಾನಕವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ್ ಗಾಂಧಿ ವಾದ್ರಾ ಹೇಳಿದ್ದಾರೆ
ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೊದಲು ರಾಯ್ ಬರೇಲಿಯಲ್ಲಿ ಹರಿಓಂ ವಾಲ್ಮೀಕಿಯವರ ಹತ್ಯೆ, ನಂತರ ಮುಖ್ಯ ನ್ಯಾಯಮೂರ್ತಿಗೆ ಆದ ಅವಮಾನ, ಮತ್ತು ಈಗ ಹಿರಿಯ ಅಧಿಕಾರಿಯ ಆತ್ಮಹತ್ಯೆ ಬಿಜೆಪಿ ಆಡಳಿತವು ದಲಿತರಿಗೆ ಶಾಪವಾಗಿ ಪರಿಣಮಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಸಾಮಾನ್ಯ ನಾಗರಿಕನಾಗಿರಲಿ ಅಥವಾ ಉನ್ನತ ಹುದ್ದೆಯಲ್ಲಿರುವ ಯಾರೇ ಆಗಿರಲಿ, ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರೆ ಅನ್ಯಾಯ ಮತ್ತು ಅಮಾನವೀಯತೆ ಅವರನ್ನು ಕಾಡುತ್ತದೆ. ಉನ್ನತ ಹುದ್ದೆಗಳಲ್ಲಿರುವ ದಲಿತರ ಸ್ಥಿತಿ ಇದೇ ಆಗಿದ್ದರೆ, ಸಾಮಾನ್ಯ ದಲಿತ ಸಮುದಾಯವು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿರಬೇಕು ಎಂಬುದನ್ನು ಊಹಿಸಿ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
