ನವದೆಹಲಿ, 22ಅಕ್ಟೋಬರ್ (ಹಿ.ಸ):
ಆ್ಯಂಕರ್ :ನವರಾತ್ರಿ ಹಬ್ಬದ ೮ನೇ ದಿನವಾದ ಇಂದು ದುರ್ಗಾ ಪೂಜೆ. ದುರ್ಗಾಷ್ಟಮಿ ಅಂಗವಾಗಿ ವಿಶ್ವದಾದ್ಯಂತ ನೆಲೆಸಿರುವ ಭಾರತೀಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭ ಕೋರಿದ್ದಾರೆ. ದುಷ್ಟಶಕ್ತಿಯ ವಿರುದ್ಧ ಗೆಲುವು, ಅಜ್ಞಾನದಿಂದ ಜಾಗೃತಿಯೆಡೆಗೆ ಮತ್ತು ಮಿಥ್ಯದಿಂದ ಸತ್ಯದೆಡೆಗಿನ ಪ್ರತೀಕ ಈ ಹಬ್ಬ. ಮಾತೆ ದುರ್ಗಾ ವಿನಾಶಕಾರಿ ಶಕ್ತಿಯ ವಿರುದ್ಧ ಹೋರಾಡುವ ಬಲ ನೀಡಲಿ ಎಂದು ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
