ಶ್ರೀನಗರ್ , 5 ಜನವರಿ(ಹಿ.ಸ):
ಆ್ಯಂಕರ್ :
ಜಮ್ಮು ಕಾಶ್ಮೀರದಲ್ಲಿನ ವಿಪರೀತ ಚಳಿ, ಮಂಜಿನ ವಾತಾವರಣದಿಂದಾಗಿ ಜಮ್ಮು ಬೇಸಿಗೆ ವಲಯದ ಶಾಲೆಗಳಿಗೆ ಚಳಿಗಾಲದ ರಜೆಯ ಅವಧಿಯನ್ನು ಸರ್ಕಾರ ಇದೇ ಆರರವರೆಗೆ ವಿಸ್ತರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಮ್ಮು ಶಾಲಾ ಶಿಕ್ಷಣ ನಿರ್ದೇಶನಾಲಯ ಜಾರಿಗೊಳಿಸಿರುವ ಆದೇಶದಲ್ಲಿ, ಆದೇಶದ ಅನುಸರಣೆಯಲ್ಲಿ ವಿಫಲವಾಗುವ ಯಾವುದೇ ಶಾಲೆಗಳ ಮುಖ್ಯಸ್ಥರು, ನಿಯಮಗಳ ಅಡಿಯಲ್ಲಿ ಕ್ರಮಕ್ಕೆ ಗುರಿಯಾಗುತ್ತಾರೆಂದು ತಿಳಿಸಲಾಗಿದೆ.
ಜಮ್ಮು ವಿಭಾಗದ ಬೇಸಿಗೆ ವಲಯದ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಚಳಿಗಾಲದ ರಜೆ ಅವಧಿಯನ್ನು ಇದೇ ಆರರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್
