ತಿರುವಂತಪುರಂ , 1 ನವೆಂಬರ್ (ಹಿ.ಸ):
ಆ್ಯಂಕರ್ :ಕೇರಳದಲ್ಲಿ ಇಂದಿನಿಂದ ಭಾರಿ ವಾಹನ ಗಳಲ್ಲಿ ಸೀಟ್ ಬೆಲ್ಟ್ ಹಾಗೂ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ತಡೆದು ತಪಾಸಣೆ ನಡೆಸುವುದಿಲ್ಲ ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ. ನವೆಂಬರ್ 1ರಿಂದ ಫಿಟ್ನೆಸ್ ಸರ್ಟಿಫಿಕೇಟ್ ಬೇಕಾದರೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಬೇಕು ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿತ್ತು. ಈ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ಸಚಿವರು ಹೇಳಿದರು.
ಸೀಟ್ ಬೆಲ್ಟ್ ಮತ್ತು ಕಣ್ಗಾವಲು ಕ್ಯಾಮೆರಾಗಳನ್ನು ಅಳವಡಿಸಿದ್ದರೆ ಮಾತ್ರ ಭಾರೀ ವಾಹನಗಳಿಗೆ ಫಿಟ್ನೆಸ್ ಪ್ರಮಾಣಪತ್ರವನ್ನು ನೀಡುವುದಾಗಿ ಕೇರಳ ಸಾರಿಗೆ ಇಲಾಖೆ ತಿಳಿಸಿದೆ. ಹಾಗಾಗಿ ಇಂದಿನಿಂದ ಲಾರಿ, ಬಸ್ ಸೇರಿದಂತೆ ಭಾರೀ ವಾಹನಗಳ ಚಾಲಕರಿಗೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ.
ಅಕ್ಟೋಬರ್ 31ರೊಳಗೆ 5,200 ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸೀಟ್ ಬೆಲ್ಟ್ ಅಳವಡಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಕೇರಳದ ಖಾಸಗಿ ಬಸ್ ಮಾಲೀಕರಿಂದ ಕಡ್ಡಾಯ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಸುಧಾರಣೆಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್
