ನವದೆಹಲಿ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಫಿಜಿಯ ಪ್ರಧಾನಮಂತ್ರಿ ಸಿತಿವೇನಿ ಲಿಗಮಮದ ರಬುಕ ಅವರು ಆಗಸ್ಟ್ 24ರಿಂದ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಅವರ ಪ್ರಧಾನ ಮಂತ್ರಿಯಾಗಿ ಭಾರತದ ಮೊದಲ ಅಧಿಕೃತ ಭೇಟಿ.
ರಬುಕ ಅವರ ಪತ್ನಿ ಸುಲುಯೆಟಿ ರಬುಕ, ಆರೋಗ್ಯ ಸಚಿವ ರತು ಆಂಟೋನಿಯೊ ಲಾಲಬಲವು ಹಾಗೂ ಹಿರಿಯ ಅಧಿಕಾರಿಗಳು ಅವರೊಂದಿಗೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಆಗಸ್ಟ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸುವ ರಬುಕ ಗೌರವಾರ್ಥವಾಗಿ ಮೋದಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಇದೇ ವೇಳೆ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ.
ಭಾರತೀಯ ಚಿಂತಕರ ಚಾವಡಿ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ನಲ್ಲಿ ಶಾಂತಿಯ ಸಾಗರ ವಿಷಯವಾಗಿ ಪ್ರಧಾನಮಂತ್ರಿ ರಬುಕ ಉಪನ್ಯಾಸ ನೀಡಲಿದ್ದಾರೆ.
ಈ ಭೇಟಿ ಭಾರತ–ಫಿಜಿ ನಡುವಿನ ದೀರ್ಘಕಾಲೀನ ಸಂಬಂಧಗಳನ್ನು ಬಲಪಡಿಸಲು ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸಲು ಮಹತ್ವದ್ದಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
