ಮಾಸ್ಕೋ, 23 ಮಾರ್ಚ್
ಆ್ಯಂಕರ್:
ಭಾರತ ಸೇರಿದಂತೆ ಇಡೀ ಜಗತ್ತಿನಾದ್ಯಂತ ಇತ್ತೀಚೆಗೆ ಭಯೋತ್ಪಾದಕರ ಆಟಾಟೋಪಕ್ಕೆ ಕಡಿವಾಣ ಬಿದ್ದಿತ್ತು. ಆದರೆ ಭೀಕರ ಘಟನೆಯಲ್ಲಿ ರಷ್ಯಾದಲ್ಲಿ ಭಯೋತ್ಪಾದನೆ ನಡೆದಿದ್ದು, ಇಡೀ ಜಗತ್ತು ತಲ್ಲಣಗೊಂಡಿದೆ.
ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಭಾರೀ ಭಯೋತ್ಪಾದಕ ದಾಳಿ ನಡೆದಿದೆ. ಐವರು ಭಯೋತ್ಪಾದಕರು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಭಾರೀ ಸಾವುನೋವು ಸಂಭವಿಸಿದ್ದು ಸದ್ಯಕ್ಕೆ 50 ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ 100ರ ಗಡಿ ದಾಟುವ ಅಪಾಯವಿದೆ. ಕಾರ್ಯಕ್ರಮ ನಡೆಯುತ್ತಿದ್ದಾಗ ಸಭಾಂಗಣದ ಒಳಗಡೆಯಿದ್ದ ಮಹಿಳೆಯರು ಮತ್ತು ಮಕ್ಕಳು ಎನ್ನದೆ ಕಂಡಕಂಡವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಬಾಂಬುಗಳನ್ನು ಎಸೆದಿದ್ದಾರೆ.
ನಾವೇ ಮಾಡಿದ್ದು ಎಂದ ಐಸಿಸ್ ಉಗ್ರ ಸಂಘಟನೆ: ರಷ್ಯಾ ರಾಜಧಾನಿ ಮಾಸ್ಕೋದ ಕನ್ಸರ್ಟ್ ಹಾಲ್ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಮಾರ್ಚ್ 7ರಂದು ಅಮೆರಿಕವು ಭಯೋತ್ಪಾದಕ ದಾಳಿ ಬಗ್ಗೆ ರಷ್ಯಾವನ್ನು ಎಚ್ಚರಿಸಿತ್ತು.
ಹಿಂ
