ಮುಂಬಯಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:
ಆಯುಷ್ಮಾನ್ ಖುರಾನಾ ಅವರ ಹೊಸ ಹಾರರ್-ಥ್ರಿಲ್ಲರ್ ಚಿತ್ರ ಥಾಮಾ ಟೀಸರ್ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಿಸಿದೆ.
ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಆಯುಷ್ಮಾನ್ ಮೊದಲ ಬಾರಿಗೆ ಹಾರರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಜೋಡಿಯಾಗಿದ್ದು, ನವಾಜುದ್ದೀನ್ ಸಿದ್ದಿಕಿ ಖಳನಾಯಕನಾಗಿ, ಪರೇಶ್ ರಾವಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟೀಸರ್‌ನಲ್ಲಿ ಆಯುಷ್ಮಾನ್–ನವಾಜುದ್ದೀನ್ ಮುಖಾಮುಖಿ, ರಶ್ಮಿಕಾ ಅವರ ಭಾವನಾತ್ಮಕ ಅಭಿನಯ ಹಾಗೂ ಮಲೈಕಾ ಅರೋರಾ, ತಮನ್ನಾ ಭಾಟಿಯಾ ಅವರ ಅತಿಥಿ ಪಾತ್ರಗಳು ಗಮನ ಸೆಳೆಯುತ್ತವೆ.
ಆದಿತ್ಯ ಸರ್ಪೋತ್ದಾರ್ ನಿರ್ದೇಶಿಸಿರುವ ಥಾಮಾ ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಮ್ಯಾಡಾಕ್ ಹಾರರ್ ಯೂನಿವರ್ಸ್‌ನ ಪ್ರಮುಖ ಭಾಗವೆಂದು ನಿರೀಕ್ಷಿಸಲಾಗಿದೆ.
—————
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
