ಬೆಂಗಳೂರು,
ಆ್ಯಂಕರ್:ಸ್ಯಾಂಡಲ್ ವುಡ್ ನಲ್ಲಿ ಇಂದಿನಿಂದ ಯುವ ಘರ್ಜನೆ ಶುರುವಾಗಲಿದೆ. , ನಟ ದಿವಂಗತ ಡಾ. ರಾಜ್ ಕುಮಾರ್ ಮೊಮ್ಮಗ, ಸ್ಟಾರ್ ಯುವರಾಜ್ ಕುಮಾರ್ ನಟನೆಯ ಚೊಚ್ಚಲ ಸಿನಿಮಾ ‘ಯುವ’ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ.
ರಾಜ್ಯಾದ್ಯಂತ ಸುಮಾರು 350ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಯುವ ಘರ್ಜನೆ ಆರಂಭವಾಗಿದ್ದು, ಯುವ ಸಂಭ್ರಮ ಜೋರಾಗಿದೆ.
ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಯುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇದೇ ಹೊಂಬಾಳೆ ಫಿಲಂಸ್ ಗೆ ರಾಜಕುಮಾರ್, ಯುವರತ್ನ, ರಾಘವೇಂದ್ರ ಸ್ಟೋರ್ಸ್ ಸಿನಿಮಾಗಳನ್ನು ಮಾಡಿಕೊಟ್ಟಿದ್ದ ಸಂತೋಷ್, ಯುವ ರಾಜ್ಕುಮಾರ್ ಅವರನ್ನೂ ಇದೀಗ ಅದೇ ಹೊಂಬಾಳೆ ಮೂಲಕ ಬಿಡುಗಡೆ ಮಾಡಿದ್ದಾರೆ.
ಯುವ ಬಿಡುಗಡೆ ಹಿನ್ನೆಲೆ ಚಿತ್ರಮಂದಿರ ಗಳ ಮುಂದೆ ಹಬ್ಬದ ಕಳೆ ಹೆಚ್ಚಿದೆ. ಕೆಜಿ ರಸ್ತೆಯ ನರ್ತಕಿ ಬಳಿ ಅಪ್ಪು ಮತ್ತು ಯುವ ರಾಜ್ ಕುಮಾರ್ ಅವರ 60 ಅಡಿ ಕಟೌಟ್ ತಲೆ ಎತ್ತಿದೆ. ಜೆಪಿ ನಗರದ ಸಿದ್ದೇಶ್ವರದಲ್ಲಂತೂ ದೊಡ್ಡ ಉತ್ಸವವೇ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಷ್ಟೇ ಅಲ್ಲ ಹೊಸಪೇಟೆ, ದಾವಣೆಗೆರೆ, ಹಾಸನ, ಚಾಮರಾಜನಗರ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅಭಿಮಾನಿಗಳು ಸ್ವಾಗತಿ ಕೋರಿದ್ದಾರೆ.ಜೂನಿಯರ್ ಅಪ್ಪು ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ಯುವ, ಆ ಪಟ್ಟವನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವ ಭರವಸೆಯನ್ನೂ ಸಿನಿಮಾ ಮೂಲಕ ನೀಡಿದ್ದಾರೆ.
