
ಮುಂಬೈ, 16 ಡಿಸೆಂಬರ್(ಹಿ.ಸ):
ಆ್ಯಂಕರ್ :
ತಮಿಳು ನಟ ದಳಪತಿ ವಿಜಯ್ ಅವರು ಇತರ ಹೀರೋಗಳಿಗಿಂತ ಸಖತ್ ಭಿನ್ನ. ಅವರು ಒಪ್ಪಿಕೊಂಡ ಸಿನಿಮಾದ ಕೆಲಸಗಳನ್ನು ಶರವೇಗದಲ್ಲಿ ಮಾಡಿ ಮುಗಿಸುತ್ತಾರೆ. ಶೂಟಿಂಗ್ ವೇಳೆ ಅವರು ಅನಗತ್ಯ ಬ್ರೇಕ್ ತೆಗೆದುಕೊಳ್ಳುವುದಿಲ್ಲ. ಈಗ ಅವರ 68ನೇ ಸಿನಿಮಾ ಸೆಟ್ಟೇರುವುದರಲ್ಲಿ ಇದೆ. ಈ ಚಿತ್ರಕ್ಕೆ ಮುಂದಿನ ವರ್ಷ ಜನವರಿಯಲ್ಲಿ ಚಾಲನೆ ಸಿಗಲಿದ್ದು, ಜುಲೈ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ವಿಜಯ್ ವೇಗ ಕಂಡು ಫ್ಯಾನ್ಸ್ ನಿಬ್ಬೆರಗಾಗಿದ್ದಾರೆ.
ದಳಪತಿ ವಿಜಯ್ ಅವರ ನಟನೆಯ ‘ವಾರಿಸು’ ಸಿನಿಮಾ ಈ ವರ್ಷ ಜನವರಿ ತಿಂಗಳಲ್ಲಿ ರಿಲೀಸ್ ಆಯಿತು. ಎಂಟು ತಿಂಗಳಲ್ಲಿ ‘ಲಿಯೋ’ ಕೆಲಸ ಪೂರ್ಣಗೊಂಡಿತು. ಹೀಗಾಗಿ ಅಕ್ಟೋಬರ್ನಲ್ಲಿ ಈ ಚಿತ್ರ ಬಿಡುಗಡೆ ಆಯಿತು. ಸದ್ಯ ವಿಜಯ್ ಬ್ರೇಕ್ನಲ್ಲಿದ್ದಾರೆ. ಜನವರಿ ವೇಳೆಗೆ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ಜನವರಿ 1ರಂದು ಹೊಸ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಅನವಾರಣ ಆಗುವ ಸಾಧ್ಯತೆ ಇದೆ.
‘ದಳಪತಿ 68’ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಜಯರಾಮ್, ಯೋಗಿ ಬಾಬು, ಮೀನಾಕ್ಷಿ ಚೌಧರಿ ನಟಿಸುತ್ತಿದ್ದಾರೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಆದಾಗ್ಯೂ ಕೆಲವು ಸುದ್ದಿ ಹರಿದಾಡಿದೆ. ಮೇ ತಿಂಗಳಲ್ಲೇ ‘ದಳಪತಿ 68’ ಚಿತ್ರವನ್ನು ವಿಜಯ್ ಘೋಷಣೆ ಮಾಡಿದರು. ಸದ್ಯ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆ. ಜೂನ್ ಅಥವಾ ಜುಲೈನಲ್ಲಿ ಚಿತ್ರ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿಯೂ ಜೋರಾಗಿದೆ.
ಹಿಂದೂಸ್ತಾನ್ ಸಮಾಚಾರ್
