
ಕೊಲ್ಕತ್ತಾ, 11 ಫೆಬ್ರವರಿ :
ಆ್ಯಂಕರ್:
ಬಾಲಿವುಡ್ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಶನಿವಾರ (ಫೆಬ್ರವರಿ 10) ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹಿರಿಯ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಈಗ ಆಸ್ಪತ್ರೆ ಕಡೆಯಿಂದ ಮಿಥುನ್ ಚಕ್ರವರ್ತಿ ಅವರ ಹೆಲ್ತ್ ಅಪ್ಡೇಟ್ ನೀಡಲಾಗಿದೆ. ಅವರಿಗೆ ಬ್ರೇನ್ ಸ್ಟ್ರೋಕ್ ಆಗಿದೆ ಎಂಬ ವಿಚಾರ ತಿಳಿದುಬಂದಿದೆ. ಮಿಥುನ್ ಚಕ್ರವರ್ತಿ ಅವರಿಗೆ ಈಗ 73 ವರ್ಷ ವಯಸ್ಸು. ಹಾಗಾಗಿ ಅಭಿಮಾನಿಗಳ ಚಿಂತೆ ಹೆಚ್ಚಿದೆ. ಸದ್ಯಕ್ಕೆ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
‘ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಮಿಥುನ್ ಚಕ್ರವರ್ತಿ ಅವರನ್ನು ನಮ್ಮ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ಕರೆತರಲಾಯಿತು. ಎಂಆರ್ಐ ಸೇರಿದಂತೆ ಹಲವು ಪರೀಕ್ಷೆ ಮಾಡಲಾಯಿತು. ಆಗ ಅವರಿಗೆ ಬ್ರೇನ್ ಸ್ಟ್ರೋಕ್ ಆಗಿರುವುದು ತಿಳಿಯಿತು. ಈಗ ಅವರಿಗೆ ಪ್ರಜ್ಞೆ ಬಂದಿದೆ. ಮಿತವಾದ ಆಹಾರ ಸೇವಿಸಿದ್ದಾರೆ. ನ್ಯೂರೋ ಫಿಸಿಷಿಯನ್, ಹೃದ್ರೋಗ ತಜ್ಞರು ಸೇರಿದಂತೆ ಹಲವು ವೈದ್ಯರು ಅವರ ಆರೋಗ್ಯವನ್ನು ಪರಿಶೀಲಿಸುತ್ತಿದ್ದಾರೆ’ ಎಂದು ಆಸ್ಪತ್ರೆ ಕಡೆಯಿಂದ ಹೆಲ್ತ್ ಅಪ್ಡೇಟ್ ನೀಡಲಾಗಿದೆ.
