
ಚಿತ್ರದುರ್ಗ, 9 ಜನವರಿ(ಹಿ.ಸ):
ಆ್ಯಂಕರ್ :
ಗೋವಾದ ಹೋಟೆಲ್ವೊಂದರಲ್ಲಿ ಮಗುವಿನ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಆಗಿರುವ ಸುಚನಾ ಸೇಠ್ ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋವಾದ ಹೋಟೆಲ್ನಲ್ಲಿ ತಂಗಿದ್ದ ಸುಚನಾ ಸೇಠ್ ಅವರು ಹೋಟೆಲ್ನಲ್ಲಿ ತಮ್ಮ ಮಗನ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸುಚನಾ ಸೇಠ್, ಸೂಟ್ ಕೇಸ್ನಲ್ಲಿ ಮಗುವಿನ ಶವ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ಸ್ಟಾರ್ಟ್ ಅಪ್ ಫೌಂಡರ್ & ಸಿಇಓ ಸುಚನಾ ಅವರು ಗೋವಾದ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು. ಇನ್ನೇನು ಹೋಟೆಲ್ನಿಂದ ಬೆಂಗಳೂರಿಗೆ ಹೋಗಲು ತಮ್ಮ ಸೂಟ್ ಕೇಸ್ ಹಿಡಿದು ಟ್ಯಾಕ್ಸಿಯತ್ತ ಹೊರಟಾಗ ಹೋಟೆಲ್ ಸಿಬ್ಬಂದಿ ನಿಮ್ಮ ಜೊತೆ ಬಂದಿದ್ದ ಮಗು ಎಲ್ಲಿ ಎಂದು ವಿಚಾರಿಸಿದ್ದಾರೆ. ಆಗ ಸುಚನಾ ಅವರು ಸಂಬಂಧಿಕರ ಮನೆಗೆ ಕಳಿಸಿದ್ದೇನೆಂದು ಸುಳ್ಳು ಹೇಳಿ ಟ್ಯಾಕ್ಸಿ ಮೂಲಕ ಬೆಂಗಳೂರಿನತ್ತ ತೆರಳಿದ್ದಾರೆ. ಈ ವೇಳೆ ಅನುಮಾನಗೊಂಡ ಹೋಟೆಲ್ನವರು ರೂಮ್ ಸ್ವಚ್ಛಗೊಳಿಸಲು ಹೋಗಿದ್ದು ಅಲ್ಲಿ ರಕ್ತದ ಕಲೆಗಳು ಪತ್ತೆ ಆಗಿವೆ. ಇದರಿಂದ ಬೆಚ್ಚಿಬಿದ್ದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
