ಬೆಂಗಳೂರು, 27 ಡಿಸೆಂಬರ್(ಹಿ.ಸ):
ಆ್ಯಂಕರ್ :ಚಾರಿತ್ರಿಕ ರಾಮ ಮಂದಿರ ಉದ್ಘಾಟನಾ ಸಮಾರಂಭವು ಜನವರಿ 22ರಂದು ನಡೆಯಲಿದ್ದು, ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ತಾರೆಯರಾದ ಯಶ್, ರಿಷಬ್ ಶೆಟ್ಟಿ ತಾರಾ ಅವರಿಗೆ ಆಹ್ವಾನ ನೀಡಲಾಗಿದೆ. ಈ ಕುರಿತಾಗಿ ಈಗಾಗಲೇ ಈ ಕಲಾವಿದರಿಗೆ ಆಮಂತ್ರಣ ಪತ್ರ ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮಂದಿರ ಉದ್ಘಾಟನೆಗೆ ಯಾರೆಲ್ಲ ಹೋಗ್ತಾರೆ?
ನಾನಾ ರಾಜ್ಯಗಳ ಜನಪ್ರಿಯ ನಟ, ನಟಿಯರಿಗೆ ರಾಮ ಮಂದಿರ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರ ಸಿಕ್ಕಿದ್ದು, ಇದರಲ್ಲಿ ಅಮಿತಾಭ್ ಬಚ್ಚನ್, ರಜನಿಕಾಂತ್, ಧನುಷ್, ಪ್ರಭಾಸ್, ಮಾಧುರಿ ದೀಕ್ಷಿತ್, ಅನುಮಲ್ ಖೇರ್, ಅಕ್ಷಯ್ ಕುಮಾರ್, ಸಂಜಯ್ ಲೀಲಾ ಬನ್ಸಾಲಿ, ಚಿರಂಜೀವಿ, ಮೋಹನ್ಲಾಲ್, ರಣಬೀರ್ ಕಪೂರ್, ಆಲಿಯಾ ಭಟ್, ಅಜಯ್ ದೇವ್ಗನ್, ಸನ್ನಿ ಡಿಯೋಲ್, ಟೈಗರ್ ಶ್ರಾಫ್, ಆಯುಷ್ಮಾನ್ ಖುರಾನಾ ಮುಂತಾದ ಸ್ಟಾರ್ಗಳು ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ಹಾಜರಿ ಹಾಕಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
