ಬೆಂಗಳೂರು, 8 ಜನವರಿ(ಹಿ.ಸ):
ಆ್ಯಂಕರ್ :
ಪುನೀತ್ ರಾಜ್ಕುಮಾರ್ ನಟಿಸಬೇಕಿದ್ದ ‘ರಂಗಸಮುದ್ರ’ ಸಿನಿಮಾ ತಮ್ಮ ಕಥಾವಸ್ತು, ಟ್ರೈಲರ್, ನಟರು ಹಾಡುಗಳ ಕಾರಣದಿಂದ ಸದ್ದಾಗುತ್ತಿದೆ. ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿರುವ ಬೆನ್ನಲ್ಲೆ ಚಿತ್ರತಂಡವು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಸಂಕ್ರಾಂತಿ ಬಳಿಕ ‘ರಂಗಸಮುದ್ರ’ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೋಣನೂರು ನಿರ್ಮಿಸಿರುವ, ರಾಜಕುಮಾರ್ ಅಸ್ಕಿ ನಿರ್ದೇಶಿಸಿ, ರಂಗಾಯಣ ರಘು ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಸಂಪತ್ ರಾಜ್ ಇನ್ನಿತರರು ಪ್ರಮುಖಪಾತ್ರದಲ್ಲಿ ನಟಿಸಿರಯವ ‘ರಂಗ ಸಮುದ್ರ’ ಸಿನಿಮಾ ಜನವರಿ 19ರಂದು ಬಿಡುಗಡೆ ಆಗಲಿದೆ. ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಮೂಲಕ “ರಂಗ ಸಮುದ್ರ” ಈಗಾಗಲೇ ಜನರ ಮನ ಗೆದ್ದಿದೆ. ಜಾನಪದ ಸೊಗಡಿನ ಹಾಗೂ ಕೌಟುಂಬಿಕ ಮನರಂಜನೆಯ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್
