ಬೆಂಗಳೂರು, 9 ಮೇ : ಆ್ಯಂಕರ್:ಚುನಾವಣೆ ಅಬ್ಬರದಿಂದಾಗಿ ಇಷ್ಟು ವಾರಗಳ ಕಾಲ ಕನ್ನಡದಲ್ಲಿ ಅಷ್ಟಾಗಿ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈಗ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಪೂರ್ಣಗೊಂಡಿದೆ. ಹೀಗಾಗಿ, ಫಲಿತಾಂಶದ (ಜೂನ್ 4) ದಿನದವರೆಗೆ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಅಬ್ಬರ ಇರುವುದಿಲ್ಲ. ಹೀಗಾಗಿ ಈ ವಾರ (ಮೇ 10) ಕನ್ನಡದಲ್ಲಿ ಕೆಲವು ಸಿನಿಮಾಗಳುಬಿಡುಗಡೆ ಆಗುತ್ತಿವೆ. ಈ ವಾರ ಕನ್ನಡದಲ್ಲಿ ರಿಲೀಸ್ ಆಗಲಿರೋ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಾಮನ ಅವತಾರ
ರಿಷಿ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಸಿನಿಮಾಗಳಲ್ಲಿ ಕಾಮಿಡಿ ಹೆಚ್ಚಿರುತ್ತದೆ. ಈಗ ಅವರು ‘ರಾಮನ ಅವತಾರ’ ಸಿನಿಮಾದಲ್ಲಿ ನಟಿಸಿದ್ದು, ಮೇ 10ರಂದು ರಿಲೀಸ್ ಆಗಲಿದೆ. ಅವರಿಗೆ ಜೊತೆಯಾಗಿ ಪ್ರಣಿತಾ ಸುಭಾಷ್ ನಟಿಸುತ್ತಿದ್ದಾರೆ. ಅರುಣ್ ಸಾಗರ್, ಶುಬ್ರಾ ಅಯ್ಯಪ್ಪ, ಅನಿರುದ್ಧ್ ಆಚಾರ್ಯ ನಟಿಸಿದ್ದಾರೆ. ವಿಕಾಸ್ ಪಂಪಾಪತಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪಕ್ಕಾ ಹಾಸ್ಯ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ.
ಗ್ರೇ ಗೇಮ್ಸ್
ವಿಜಯ್ ರಾಘವೇಂದ್ರ ನಟನೆಯ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಅವರ ನಟನೆಯ ‘ಗ್ರೇ ಗೇಮ್ಸ್’ ಸಿನಿಮಾ ಕೂಡ ಮೇ 10ರಂದು ಬಿಡುಗಡೆ ಆಗುತ್ತಿದೆ. ಶ್ರುತಿ ಪ್ರಕಾಶ್, ಭಾವನಾ ರಾವ್, ಜೈ ಗೋಪಿನಾಥ್, ಇಶಿತಾ ಸಿಂಗ್, ಅರ್ಪಣಾ, ರವಿ ಭಟ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಗಂಗಾಧರ್ ಸಾಲಿಮಠ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಆನಂದ್ ಮುಗದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿ: ಕೇವಲ 99 ರೂಪಾಯಿಗೆ ‘ರಾಮನ ಅವತಾರ’ ಸಿನಿಮಾ ನೋಡುವ ಆಫರ್
ಕಳೆದ ವಾರದ ಸಿನಿಮಾ
ಕಳೆದ ವಾರ ರಿಲೀಸ್ ಆದ ‘ಕಾಂಗರೂ’ ಸಿನಿಮಾ ಕೂಡ ಥಿಯೇಟರ್ನಲ್ಲಿದೆ. ಆದಿತ್ಯ, ರಂಜನಿ ರಾಘವನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕೂಡ ಥಿಯೇಟರ್ನಲ್ಲಿ ಸ್ಪರ್ಧೆಯಲ್ಲಿದೆ. ತೆಲುಗಿನಲ್ಲಿ ‘ಆರ್ಆರ್ಆರ್’ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
