
ಬಳ್ಳಾರಿ, 5 ಡಿಸೆಂಬರ್(ಹಿ.ಸ):
ಆ್ಯಂಕರ್: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ ಅವರ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳದವರಾದ ಚಂದ್ರಶೇಖರ್ ಅವರು ಹೊಸಪೇಟೆಯಲ್ಲಿ ಕುಟುಂಬದೊAದಿಗೆ ವಾಸವಾಗಿದ್ದು, ಬಳ್ಳಾರಿಯ ನಾಗಲಚರವು ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೊಸಪೇಟೆ ಮತ್ತು ಚಿತ್ರದುರ್ಗದಲ್ಲಿ ಕೆಲಸ ಮಾಡಿ ಬಳ್ಳಾರಿಗೆ ವರ್ಗಾವಣೆಯಾಗಿದ್ದರು.
ಹಿರಿಯ ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಇವರು ಅಪಾರ ಅಕ್ರಮ ಆಸ್ತಿ ಮಾಡಿದ್ದಾರೆ ಮರಳು ಗಣಿಗಾರಿಕೆಗೆ ಅನಧಿಕೃತವಾಗಿ ಪರವಾನಿಗೆ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು ಎನ್ನಲಾಗಿದೆ.
ಹೊಸಪೇಟೆಯ ಅನಂತಶಯನ ಗುಡಿಯ ಶ್ರೀರಾಮ್ ನಗರದಲ್ಲಿರುವ ಮನೆ, ಬಳ್ಳಾರಿಯಲ್ಲಿ ಲೋಕಾಯುಕ್ತ ಎಸ್ಪಿ ಶಶಿಧರ್, ಸಿಪಿಐ ಮಹಮ್ಮದ್ ರಫೀಕ್, ಹೊಸಪೇಟೆ ಲೋಕಾಯುಕ್ತ ಸಿಪಿಐ ರಾಜೇಶ್ ಲಮಾಣಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಮತ್ತೊಂದಡೆ ಅರಣ್ಯ ಇಲಾಖೆಯ ಗಂಗಾವತಿಯ ಆರ್ ಎಫ್ ಓ ಮಾರುತಿ ಅವರ ಮನೆ ಕಂಪ್ಲಿಯಲ್ಲಿದ್ದು. ಈ ಮನೆ ಮೇಲೆ ಸಹ ಲೋಕಾ ದಾಳಿ ನಡೆದಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.
