
ತೋರಣಗಲ್ಲು, 6 ಜನವರಿ(ಹಿ.ಸ):
ಆ್ಯಂಕರ್ : ತೋರಣಗಲ್ಲು ಪೋಲಿಸ್ ಠಾಣೆ ವ್ಯಾಪ್ತಿಯ ಹೊಸದರೋಜಿ ಗ್ರಾಮದ ಜೆ.ಎರ್ರಿಸ್ವಾಮಿ ಎನ್ನುವ 60 ವರ್ಷದ ವ್ಯಕ್ತಿಯು ಡಿ.26 ರಂದು ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸಬೇಕೆಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಗುರುತು : ಎತ್ತರ 5 ಅಡಿ, ಬೋಳು ತಲೆ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು, ಹಿಂದಿ ಭಾಷೆ ಮಾತಾನಾಡುತ್ತಾರೆ. ಕಾಣೆಯಾದ ಸಂಧರ್ಭದಲ್ಲಿ ನೀಲಿ ಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯು ಕಂಡುಬಂದಲ್ಲಿ ತೋರಣಗಲ್ಲು ಪೋಲಿಸ್ ಠಾಣೆಯ ದೂ:08395-250100, ಮೊ:9480803062 ಅಥವಾ ಸಂಡೂರು ವೃತ್ತ ಸಿ.ಪಿ.ಐ ದೂ:08395-260100, ಮೊ:9480803036 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ:08392-279100 ಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಅವರು ತಿಳಿಸಿದ್ದಾರೆ.
