ರಾಂಚಿ, 14 ಫೆಬ್ರವರಿ :
ಆ್ಯಂಕರ್ : ಜಾರ್ಖಂಡ್ ನಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ಹಂತವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸಲು ಹಿರಿಯ ಕಾಂಗ್ರೆಸ್ ನಾಯಕ ದೆಹಲಿಗೆ ಧಾವಿಸಿದ್ದರಿಂದ ಯಾತ್ರೆ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗರ್ವಾ ಜಿಲ್ಲೆಯ ರಂಕಾದಲ್ಲಿ ಎಂಜಿ ಎನ್ ಆರ್ ಇ ಜಿ ಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದವನ್ನು ಈಗ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮತ್ತು ಇತರ ಪಕ್ಷದ ನಾಯಕರು ನಡೆಸಲಿದ್ದಾರೆ. ಛತ್ತೀಸ್ ಗಢದಿಂದ ಗಾಂಧಿ ಅವರು ಜಾರ್ಖಂಡ್ ಗೆ ಎರಡನೇ ಹಂತದ ಯಾತ್ರೆಗಾಗಿ ಬುಧವಾರ ಗಹ್ವಾರ್ ಜಿಲ್ಲೆಯ ಮೂಲಕ ಮರುಪ್ರವೇಶ ಮಾಡಬೇಕಿತ್ತು. ತಡರಾತ್ರಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಜಾರ್ಖಂಡ್ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸೋನಾಲ್ ಶಾಂತಿ ತಿಳಿಸಿದ್ದಾರೆ.
