ಕೋಲಾರ, ೪ ನವಂಬರ್ (ಹಿ.ಸ) :
ಆ್ಯಂಕರ್ : ಇತ್ತೀಚಿನ ದಿನಗಳಲ್ಲಿ ಕೋಲಾರ ನಗರದಲ್ಲಿ ಯುವಕರಲ್ಲಿ ಅಪರಾಧ ಭಾವನೆ ಹೆಚ್ಚುತ್ತಿದೆ. ತಪ್ಪು ಮಾಡುವ ಮಕ್ಕಳನ್ನು ಪೋಷಕರು ಪ್ರಶ್ನೆ ಮಾಡುವುದಿಲ್ಲ. ತಪ್ಪು ಮಾಡಿ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸುವುದಿಲ್ಲ. ಇದರಿಂದಾಗಿ ಯುವಕರಲ್ಲಿ ಕಾನೂನು ಬಗ್ಗೆ ಗೌರವ ಇಲ್ಲ. ನೆನ್ನೆಯ ದಿನ ರಾತ್ರಿ ಕೋಲಾರದಲ್ಲಿ ನಡೆದಿರುವ ಯುವಕನ ಕೊಲೆ ಪ್ರಕರಣ ಕುಸಿಯುತ್ತಿರುವ ಕಾನೂನು ಸುವ್ಯವಸ್ಥೆಗೆ ಕೈಗನ್ನಡಿಯಾಗಿದೆ.
ಡಾನ್ ಆಗಬೇಕು ಎಂದು ಕನಸ್ಸು ಕಂಡಿದ್ದ ಅಪ್ರಾಪ್ತ ಬಾಲಕ, ಮತ್ತೊಬ್ಬ ಬಾಲಕನನ್ನು ಕೊಲೆ ಮಾಡಿ ತಲೆಮರಿಸಿಕೊಂಡಿದ್ದಾನೆ. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಹರೆಯದ ಬಾಲಕನನ್ನು ಯುವಕರ ಗುಂಪು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ನಗರದ ಶಾಂತಿ ನಗರದ ನಿವಾಸಿಗಳಾದ ಅರುಣ್ ಹಾಗೂ ಸುಶೀಲ ಮಗ ಕಾರ್ತಿಕ್ ಸಿಂಗ್ (೧೭) ಕೊಲೆಯಾಗಿದೆ. ಹಳೇ ವೈಷ್ಯಮದಿಂದ ಇದೇ ಬಡಾವಣೆಯ ನಿವಾಸಿ ಹೆಸರು ಬದಲಾವಣೆಯಿಸಿಕೊಂಡಿರುವ ಅಪ್ರಾಪ್ತ ಬಾಲಕ (ಶೈನ್) ಮತ್ತು ಸ್ನೇಹಿತರು ಸೇರಿಕೊಂಡು ಕಾರ್ತಿಕ್ ಸಿಂಗ್ನನ್ನು ಹುಟ್ಟು ಹಬ್ಬ ಆಚರಣೆ ಮಾಡಬೇಕು ಎಂದು ಹೇಳಿ ಸರ್ಕಾರಿ ಶಾಲೆ ಆವರಣಕ್ಕೆ ರಾತ್ರಿ ೭ ಗಂಟೆ ಸುಮಾರಿಗೆ ಕರೆಸಿಕೊಂಡಿದ್ದಾರೆ.
ಮತ್ತೊಬ್ಬ ಸ್ನೇಹಿತ ಕಾರ್ತಿಕ್ ಸಿಂಗ್ನನ್ನು ಬಾಪೂಜಿ ಶಾಲೆ ಸಮೀಪ ಬಿಟ್ಟು ಹೊರಡುತ್ತಾನೆ. ಅಲ್ಲಿದ್ದವರು ಬಾಪೂಜಿ ಶಾಲಾ ಆವರಣಕ್ಕೆ ಕರೆದುಕೊಂಡು ಕೂರಿಸಿಕೊಳ್ಳುತ್ತಾರೆ. ಆನಂತರ ಶೈನ್ ಹಾಗೂ ಸ್ನೇಹಿತರು ರಾತ್ರಿ ೭.೩೦ರಲ್ಲಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಕೊಲೆಗೂ ಮುನ್ನ ಬಟ್ಟೆ ಬಿಚ್ಚಿಸಿದ್ದಾರೆ, ಆನಂತರ ಸ್ನೇಹಿತರೆಲ್ಲ ಕೂಡಿ ದೈಹಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆ. ಇದಕ್ಕೆ ಕಾರ್ತಿಕ್ ಸಿಂಗ್ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈ ಮೇಲೆ ಚಾಕು, ಗಾಜಿನಿಂದ ಕೊಯ್ದು ಕೊಲೆ ಮಾಡಿದ್ದಾರೆ. ಕಾರ್ತಿಕ್ ಸಿಂಗ್ ಮೃತಪಡುತ್ತಿದ್ದಂತೆ ಶೈನ್ ಮತ್ತು ಸ್ನೇಹಿತರು ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ.ಕೊಲೆ ಆರೋಪಿಗಳು ತಲೆ ಮರಿಸಿಕೊಂಡಿದ್ದು, ಅವರ ಪತ್ತೆಗಾಗಿ ೩ ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ. ಅನುಮಾನಸ್ಪದ ಮೂರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶೈನ್ ತನ್ನ ೧೬ನೇ ಹುಟ್ಟು ಹಬ್ಬವನ್ನು ೨೦೨೨ರ ನವೆಂಬರ್ ೨೨ರಂದು ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರ ಜತೆಗೂಡಿ ಕೇಕನ್ನು ಲಾಂಗ್ ಮೂಲಕ ಕತ್ತರಿಸಿದ್ದರು. ಪೋಟೊಗಳನ್ನು ಪೇಸ್ ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು, ಸದ್ದು ಮಾಡಿದ್ದರು.
ವೇಮಗಲ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಮುರುಗನ್ ಮಗನಾಗಿರುವ ಶೈನ್ ಕಳೆದ ಫೆಬ್ರವರಿ ತಿಂಗಳಲ್ಲಿ ಪೇಟೆಚಾಮನಹಳ್ಳಿ ನಿವಾಸಿಗಳಾದ ಗಣೇಶ್ ಮತ್ತು ಗಗನ್ ಮೇಲೆ ಇದೇ ಗುಂಪು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆಗ ಗಗನ್ ಪೋಷಕರು ಶೈನ್ ಹಾಗೂ ೩ ಮಂದಿ ಬಾಲಕರ ವಿರುದ್ಧ ದೂರು ದಾಖಲಿಸಿದ್ದರು. ಆಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಪೊಲೀಸ್ ಮಗನೆ ಆಗಿದ್ದರಿಂದ ಅಪ್ರಾಪ್ತ ಎಂದು ಹೇಳಿ ಬಿಟ್ಟು ಬಿಟ್ಟಿದ್ದರು.
ಶೈನ್ ಈ ಇಬ್ಬರು ಬಾಲಕರನ್ನು ನಗರದ ಟೇಕಲ್ ರಸ್ತೆಯಲ್ಲಿ ಅಡ್ಡಗಟ್ಟಿ ಸರ್ಕಾರಿ ಶಾಲಾ ಆವರಣಕ್ಕೆ ಕರೆಸಿಕೊಂಡಿದ್ದರು. ಇಬ್ಬರು ಮೇಲೆ ಹಲ್ಲೆ ನಡೆಸಿ, ನಾನಂದರೆ ಏನು ಅಂದುಕೊ0ಡಿದೀರ, ನನ್ನ ಮುಂದೆ ನಡೆದುಕೊಂಡು ಹೋಗಬಾರದು, ನಿಮ್ಮ ಇಬ್ಬರನ್ನು ಈವತ್ತು ಮುಗಿಸುತ್ತೇನೆ ಎಂದು ಹೇಳಿ ಕೊಲೆ ಬೆದರಿಕೆ ಹಾಕಿರುತ್ತಾನೆ.
ಮೈ ಮೇಲೆ ಹುಷಾರು ಇಲ್ಲ ಎಂದು ಮನೆಯಲ್ಲಿ ಇದ್ದ, ಕಾಲೇಜಿಗೂ ಹೋಗಿಲ್ಲ, ಸಂಜೆ ಸ್ನೇಹಿತರು ಕರೆದಿದ್ದಾರೆ ಎಂದು ಹೋಗಿದ್ದ ಎಂದು ಮನೆಗೆ ಬಂದ ಮೇಲೆ ತಿಳಿಯಿತು. ನಾನು ಕಾರ್ತಿಕ್ಗೆ ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಫ್ ಬಂತು. ಸ್ವಲ್ಪ ಹೊತ್ತಿಗೆ ಬಾವ ಬಂದು ಕಾರ್ತಿಕ್ನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕೂಡಲೇ ಶಾಲೆಯ ಹತ್ತಿರ ಹೋಗಿ ನೋಡಿದಾಗ ಕೊಲೆಯಾಗೋಗಿದ್ದಾನೆ. ಆರೋಪಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ತಾಯಿ ಸುಶೀಲ ಒತ್ತಾಯಿಸಿದ್ದಾರೆ.
ಕಾರ್ತಿಕ್ ಸಿಂಗ್, ಶೈನ್ ಮತ್ತು ಸ್ನೇಹಿತರು ಒಂದೇ ಏರಿಯದವರಾಗಿದ್ದು, ಸುಮಾರು ವರ್ಷಗಳಿಂದ ಪೇಟೆಚಾಮನಹಳ್ಳಿಯಲ್ಲಿ ವಾಸವಿದ್ದಾರೆ. ಕಾರ್ತಿಕ್ ಸಿಂಗ್, ಶೈನ್ ಇಬ್ಬರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜತೆಗೆ ಬಡಾವಣೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಶೈನ್ ಇತ್ತೀಚಿಗೆ ವ್ಯಾಂಗಸ ಬಿಟ್ಟು ಪುಡಾರಿಗಳ ಜತೆ ಓಡಾಡುತ್ತಿದ್ದ. ಕಾಲೇಜಿನ ಹುಡುಗಿಗೆ ಕಾರ್ತಿಕ್ ಮೊಬೈಲ್ ಸಂದೇಶ ಕಳುಹಿಸಿದ್ದ ಎಂದು ಈ ಹಿಂದೆ ಇಬ್ಬರ ನಡುವೆ ಜಗಳವಾಗಿತ್ತು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಶೈನ್ ಸ್ಮೇಹಿತರೊಂದಿಗೆ ಈ ಕೃತ್ಯ ವೆಸಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚಿತ್ರ : ಕೋಲಾರದ ಟೇಕಲ್ ರಸ್ತೆಯ ಪೇಟೆಚಾಮನಹಳ್ಳಿ ಬಡಾವಣೆಯ ಶಾಲಾ ಆವರಣದಲ್ಲಿ ಕೊಲೆಗೆ ಮೊದಲು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಿರುವ ಆರೋಪಿಗಳು
