
ಕೋಲಾರ, ೧೬ ಡಿಸೆಂಬರ್ (ಹಿ.ಸ):
ಆ್ಯಂಕರ್ : ಕೆಜಿಎಫ್ ನಗರದ ಆಂಡ್ರಸನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಾಲಕರ ಸರ್ಕಾರಿ ಬಾಲಮಂದಿರದಿ0ದ ೨೦೧೬ರಲ್ಲಿ ನಾಪತ್ತೆಯಾಗಿದ್ದ ಬಾಲಕ ೭ ವರ್ಷದ ಬಳಿಕ ಪತ್ತೆ ಮಾಡುವಲ್ಲಿ ಸಿಇಎನ್ ಕ್ರೆöÊಂ ಪೊಲೀಸರು ಪತ್ತೆಹಚ್ಚಿದ್ದಾರೆ.
ಕಳೆದ ೨೦೧೬ರ ಸೆ.೫ ರಂದು ಸಂಜೆ ಕೆ.ಜಿ.ಎಫ್ ಮಸ್ಕಂನಲ್ಲಿನ ಬಾಲಕರ ಸರ್ಕಾರಿ ಬಾಲಮಂದಿರದಿ0ದ ೧೪ ವರ್ಷದ ಬಾಲಕ ಕಾಣೆಯಾಗಿರುತ್ತಾನೆಂದು ಬಾಲಮಂದಿರದ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಂಡ್ರಸನ್ಪೇಟೆ ಪೊಲೀಸ್ ಠಾಣೆಯವರು ಸುಮಾರು ೬ ವರ್ಷಗಳ ಕಾಲ ತನಿಖೆಯನ್ನು ಕೈಗೊಂಡಿದ್ದು, ಬಾಲಕನು ಪತ್ತೆಯಾಗದ ಕಾರಣ ಮೇಲಾಧಿಕಾರಿಗಳ ಆದೇಶದಂತೆ, ಪೊಲೀಸ್ ನಿರೀಕ್ಷಕರು, ಸಿ.ಇ.ಎನ್ ಕ್ರೆöÊಂ ಪೊಲೀಸ್ ಠಾಣೆ ರವರು ತನಿಖೆ ವಹಿಸಿಕೊಟ್ಟಿದ್ದರು.
ತನಿಖೆಯನ್ನು ಮತ್ತು ಪತ್ತೆ ಕಾರ್ಯಕ್ಕೆ ಸಿ.ಇ.ಎನ್ ಕ್ರೆöÊಂ ಪೊಲೀಸ್ ಠಾಣೆಯ ಪಿಎಸ್ಐ ಜೆ.ಪರಿಮಳ ಮತ್ತು ಅಪರಾಧ ಸಿಬ್ಬಂದಿಗಳಾದ ಎಸ್.ಆರ್. ಚೇತನ್ ಯಾದವ್, ಚೇತನ್ ಕುಮಾರ್ ರವರನ್ನು ನೇಮಿಸಲಾಗಿತ್ತು. ಅಪರಾಧ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಾಣೆಯಾಗಿದ್ದ ಅಂದಿನ ೧೪ ವರ್ಷದ ಬಾಲಕ ಈಗ ೨೧ ವರ್ಷದ ಯುವಕನನ್ನು ಕೋಲಾರ ತಾಲ್ಲೂಕು, ರಾಮಸಂದ್ರ ಗ್ರಾಮದಲ್ಲಿ ಪತ್ತೆ ಮಾಡಲಾಯಿತು. ರಾಮಸಂದ್ರ ಗ್ರಾಮದ ಬೀರಪ್ಪ ಮತ್ತು ಭೂಲಕ್ಷಿö್ಮದೇವಿ ರವರ ಪೋಷಣೆಯಲ್ಲಿದ್ದವ ಯುವಕನನ್ನು ಪತ್ತೆ ಮಾಡಿ ಬಾಲಕರ ಸರ್ಕಾರಿ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್ ಸಂಸ್ಥೆಯಲ್ಲಿ ಹಾಜರು ಪಡಿಸಲಾಗಿದೆ.
