ದೆಹಲಿ, 19 ಡಿಸೆಂಬರ್(ಹಿ.ಸ):
ಆ್ಯಂಕರ್ :
ಭಾರತದಲ್ಲಿ ಇಸ್ರೋಗೆ ಸೀಮಿತವಾಗಿದ್ದ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಯವರಿಗೆ ತೆರೆದ ಬಳಿಕ ಸಾಕಷ್ಟು ಸ್ಟಾರ್ಟಪ್ಗಳು ಆರಂಭಗೊಂಡಿವೆ. ವರದಿ ಪ್ರಕಾರ ಹಲವು ಸ್ಟಾರ್ಟಪ್ಗಳಿಗೆ ಸುಲಭವಾಗಿ ಬಂಡವಾಳವೂ ಸಿಕ್ಕುತ್ತಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿರುವ ಮಾಹಿತಿ ಪ್ರಕಾರ ಭಾರತದ ನವೋದ್ದಿಮೆಗಳು (ಸ್ಟಾರ್ಟಪ್) ಈ ಹಣಕಾಸು ವರ್ಷದ (2023-24ರಲ್ಲಿ) 9 ತಿಂಗಳಲ್ಲಿ 1,000 ಕೋಟಿ ರೂಗೂ ಹೆಚ್ಚು ಮೊತ್ತದ ಖಾಸಗಿ ಹೂಡಿಕೆಗಳನ್ನು ಆಕರ್ಷಿಸಿವೆಯಂತೆ.
ಭಾರತದ ಈಗಿನ ಸ್ಪೇಸ್ ಎಕನಾಮಿ ಅಥವಾ ಬಾಹ್ಯಾಕಾಶ ಕ್ಷೇತ್ರವು 8 ಬಿಲಿಯನ್ ಡಾಲರ್ ಬಲ ಮಾತ್ರ ಹೊಂದಿದೆ. ಆದರೆ, 2040ರಷ್ಟರಲ್ಲಿ ಆ ಆರ್ಥಿಕತೆಯ ಗಾತ್ರ ಹಲವು ಪಟ್ಟು ಹೆಚ್ಚಾಗಲಿದೆ. ಆರ್ಥರ್ ಡಿ ಲಿಟಲ್ ವರದಿ ಪ್ರಕಾರ ಭಾರತದ ಸ್ಪೇಸ್ ಎಕನಾಮಿ 2040ರಷ್ಟರಲ್ಲಿ 100 ಬಿಲಿಯನ್ ಡಾಲರ್ ಮುಟ್ಟಬಹುದು ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
