ಮುಂಬೈ, 8 ಫೆಬ್ರವರಿ :
ಆರ್ ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಮೂರು ದಿನಗಳ ಸಭೆ ಇಂದು ಅಂತ್ಯವಾಗುತ್ತಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ (ಫೆ. 8) ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಭೆಯ ನಿರ್ಧಾರ ಮತ್ತು ಚರ್ಚಿತ ಸಂಗತಿಗಳನ್ನು ಬಹಿರಂಗಪಡಿಸಲಿದ್ದಾರೆ. ಫೆಬ್ರುವರಿ 6ರಂದು ಆರಂಭಗೊಂಡ ಎಂಪಿಸಿ ಸಭೆಯಲ್ಲಿ ರೆಪೋ ಸೇರಿದಂತೆ ವಿವಿಧ ದರಗಳನ್ನು ಎಷ್ಟು ಇಡಬೇಕು ಎಂಬಿತ್ಯಾದಿ ವಿಚಾರಗಳ ಚರ್ಚೆಯಾಗಿದೆ. ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ ಬೆಳಗ್ಗೆ 10 ಗಂಟೆಗೆ ಆರಂಭವಾಗುತ್ತದೆ. ಸುದ್ದಿಗೋಷ್ಠಿ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕೆಲ ವರದಿಗಳ ಪ್ರಕಾರ, ರೆಪೋ ದರ ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಬ್ಲೂಮ್ ಬರ್ಗ್ ನಡೆಸಿದ ಸಮೀಕ್ಷೆಯಲ್ಲಿ 41 ಆರ್ಥಿಕ ತಜ್ಞರು ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇವರೆಲ್ಲರ ಪ್ರಕಾರ ರೆಪೊ ದರದಲ್ಲಿ ಈ ಬಾರಿಯೂ ಬದಲಾವಣೆ ಆಗುವ ಸಾಧ್ಯತೆ ಇಲ್ಲ. ಗೋಲ್ಡ್ ಮ್ಯಾನ್ ಸ್ಯಾಕ್ಸ್,, ಬಾರ್ಕ್ಲೇಸ್, ಎಸ್ಬಿಐ ರಿಸರ್ಚ್ ಮೊದಲಾದ ಸಂಸ್ಥೆಗಳ ಆರ್ಥಿಕ ತಜ್ಞರು ಇದೇ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
