ನವದೆಹಲಿ, 4 ಫೆಬ್ರವರಿ :
ಆ್ಯಂಕರ್ :ಜಿಎಸ್ಟಿ ಇಂಟಲಿಜಿಯನ್ಸ್ ಮಹಾನಿರ್ದೇಶನಾಲಯವು, ಪ್ರಸ್ತುತ ಆರ್ಥಿಕ ವರ್ಷದ ಡಿಸೆಂಬರ್ವರೆಗೆ ೧ ಸಾವಿರದ ೭೦೦ ಮೋಸದ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣಗಳನ್ನು ಪತ್ತೆ ಮಾಡಿದೆ. ೧೮ ಸಾವಿರ ಕೋಟಿ ರೂಪಾಯಿ ಮೊತ್ತದ ಈ ಮೋಸದ ಪ್ರಕರಣಗಳಿಗೆ ಸಂಬಂಧಿಸಿದಂತೆ ೯೮ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
