ಹಂಪಿ, 4 ಫೆಬ್ರವರಿ :
ಆ್ಯಂಕರ್ :
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರೋ ಐತಿಹಾಸಿಕ ಹಂಪಿ ಉತ್ಸವ 2ನೇ ದಿನವೂ ಬಹಳ ಅದ್ಧೂರಿಯಾಗಿ ಜರುಗಿತು. ನಟ ಚಾಲೇಂಜಿಂಗ್ ಸ್ಟಾರ್ ದರ್ಶನ್ ಉತ್ಸವಕ್ಕೆ ಆಗಮಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದಿತ್ತು. ಹಾಗಾದ್ರೆ, ಉತ್ಸವದ 2ನೇ ಹೈಲೆಟ್ಸ್ ಹೇಗಿತ್ತು?.
ಹಂಪಿ ಉತ್ಸವದಲ್ಲಿ ಬೃಹತ್ ವೇದಿಕೆ, ಸಂಗೀತ ಸಂಜೆ, ಹಾಡಿನ ಝೇಂಕಾರ, ಕುಣಿತದ ವೈಯ್ಯಾರಕ್ಕೆ ಬಣ್ಣ ಬಣ್ಣದ ಲೈಟಿಂಗ್ಸ್ಗಳ ಉತ್ಸಾಹ ತುಂಬಿದವು. ನಡುವೆ ಸ್ಟಾರ್ಸ್ಗಳ ಧಮಾಕ ಮನರಂಜನೆ ನೀಡಿತು. ಇದು ಐತಿಹಾಸಿಕ ಹಂಪಿ ಉತ್ಸವದ ಎರಡನೇ ದಿನದ ಝಲಕ್.
ಹಂಪಿ ಉತ್ಸವದ ಎರಡನೇ ದಿನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಧೂರಿ ಚಾಲನೆ ನೀಡಿದ್ರು. ನಟ ದರ್ಶನ್ ವೇದಿಕೆ ಮೇಲೆ ಬರ್ತಿದ್ದಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಗಾಯಿತ್ರಿ ಪೀಠ ಮುಖ್ಯ ವೇದಿಕೆಯಲ್ಲಿ 2ನೇ ದಿನ ಹಂಪಿ ಉತ್ಸವ ಮೇಳೈಸಿತು.
ವೇದಿಕೆ ಮೇಲೆ ಆಗಮಿಸಿದ್ದ ನಟ ದರ್ಶನ್, ವಿಜಯ ನಗರ ಸಾಮ್ರಾಜ್ಯದ ಇತಿಹಾಸವನ್ನ ಮೆಲುಕು ಹಾಕಿದ್ರು. 2018ರಲ್ಲಿ ಹಂಪಿಗೆ ಬಂದಿದ್ದೆ. 5 ವರ್ಷದ ಬಳಿಕ ಬಂದಿದ್ದೇನೆ. ಕೃಷ್ಣದೇವರಾಯ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ ಅವರ ಹೆಸರನ್ನ ನಾನು ಯಾವಾಗಲು ನೆನೆಸಿಕೊಳ್ಳುವೆ. ಅವರ ನಾಡಿಗಾಗಿ ಮಡಿದವರು. ಅವರ ಆತ್ಮಗಳು ನಮ್ಮ ಜೊತೆನೇ ಇರುತ್ತೆ. ನಮಗೆಲ್ಲರಿಗೂ ಇತಿಹಾಸ ಗೊತ್ತಿರಬೇಕು.
ಇನ್ನು, ಇದೇ ವೇಳೆ ಮಾತನಾಡುವಾಗ ಸಚಿವ ಜಮೀರ್ ಅಹ್ಮದ್ರನ್ನ ಬಾಯ್ ಅನ್ನೋ ಮೂಲಕ ಕೊಂಡಾಡಿದ್ರು. ಜಮೀರ್ ಮಾತಿಗೆ ಓಗೊಟ್ಟು ಕಾರ್ಯಕ್ರಮಕ್ಕೆ ಬಂದೇ ಎಂದು ತಿಳಿಸಿದ್ರು. ಇದೇ ವೇಳೆ ಅಭಿಮಾನಿಗಳ ಆಶಯದಂತೆ ನಟ ದರ್ಶನ್ ಇತ್ತಿಚಿಗೆ ತೆರೆಕಂಡ ಕಾಟೇರ ಸಿನಿಮಾದ ಡೈಲಾಗ್ ಹೇಳಿದ್ರು. ಈ ವೇಳೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
