ನವದೆಹಲಿ, ಆ್ಯಂಕರ್ :ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಫ್ ಎಸ್ ಎಸ್ ಎಐ, ತಮ್ಮ ಜಾಲತಾಣಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಆಹಾರ ಉತ್ಪನ್ನಗಳ ಸಮರ್ಪಕ ವರ್ಗೀಕರಣವನ್ನು ಖಾತರಿ ಪಡಿಸಿಕೊಳ್ಳಬೇಕೆಂದು ಎಲ್ಲಾ ಇ-ವಾಣಿಜ್ಯ ಆಹಾರ ವ್ಯಾಪಾರ ಕಾರ್ಯನಿರ್ವಾಹಕರುಗಳಿಗೆ ಸೂಚಿಸಿದೆ.
ಹೆಲ್ತ್ ಡ್ರಿಂಕ್ ಮತ್ತು ಎನರ್ಜಿ ಡ್ರಿಂಕ್ ವರ್ಗದ ಅಡಿಯಲ್ಲಿ ಇ-ವಾಣಿಜ್ಯ ಜಾಲತಾಣಗಳಲ್ಲಿ ಡೈರಿ ಆಧರಿತ ಪಾನೀಯ ಮಿಶ್ರಣಗಳು, ಬೇಳೆಕಾಳು ಆಧರಿತ ಪಾನೀಯ ಮಿಶ್ರಣಗಳು, ಮತ್ತು ಮಾಲ್ಟ್ ಆಧಾರಿದ ಪಾನೀಯಗಳ ಮಾರಾಟ ಮಾಡುತ್ತಿರುವುದನ್ನು ಎಫ್ ಎಸ್ ಎಸ್ ಎ ಐ ,ಗಮನಿಸಿದೆ. ಆಹಾರ ಸುರಕ್ಷತೆ ಮತ್ತು ಪ್ರಮಾಣಗಳು ಕಾಯ್ದೆ ಮತ್ತು ನಿಬಂಧನೆಗಳಲ್ಲಿ ಎಲ್ಲಿಯೂ ಕೂಡಾ ಹೆಲ್ತ್ ಡ್ರಿಂಕ್ ಎನ್ನುವ ಪದವನ್ನು ವ್ಯಾಖ್ಯಾನಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದು ಎಫ್ ಎಸ್ ಎಸ್ ಎ ಐ , ಸ್ಪಷ್ಟೀಕರಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಎಲ್ಲಾ ಇ-ಕಾಮರ್ಸ್ ಆಹಾರ ವ್ಯಾಪಾರ ಕಾರ್ಯನಿರ್ವಾಹಕರುಗಳಿಗೆ ತಮ್ಮ ಜಾಲತಾಣಗಳಲ್ಲಿ ಆರೋಗ್ಯ ಪಾನೀಯಗಳು ಮತ್ತು ಶಕ್ತಿ ಪಾನೀಯಗಳ ವರ್ಗದಿಂದ ಅಂತಹ ಪಾನೀಯಗಳು ಅಥವಾ ಪಾನೀಯಗಳನ್ನು ತೆಗೆದುಹಾಕುವ ಅಥವಾ ಡಿ-ಲಿಂಕ್ ಮಾಡುವ ಮೂಲಕ ಈ ತಪ್ಪು ವರ್ಗೀಕರಣವನ್ನು ತ್ವರಿತವಾಗಿ ಸರಿಪಡಿಸಬೇಕೆಂದು ಸಲಹೆ ನೀಡಿದೆ. ತಪ್ಪುದಾರಿಗೆಳೆಯುವ ಮಾಹಿತಿಯನ್ನು ಎದುರಿಸದೆ, ಗ್ರಾಹಕರು ಉತ್ತಮ ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಬಹುದು ಎಂದು ಖಚಿತಪಡಿಸಿಕೊಳ್ಳಬೇಕೆನ್ನುವುದು ಈ ಕ್ರಮವು ಉದ್ದೇಶವಾಗಿದೆ ಎಂದು ಸಚಿವಾಲಯ ಹೇಳಿದೆ.
