ನವದೆಹಲಿ, 5 ಮಾರ್ಚ್ :
ಆ್ಯಂಕರ್:ಪ್ರೀಮಿಯಂ ಸ್ಕೂಟರ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಇವಿ ಸ್ಕೂಟರ್ ಮೇಲಿನ ಕೊಡುಗೆ ಗಳ ಅವಧಿಯನ್ನು ವಿಸ್ತರಿಸಿದ್ದು, ಎಸ್1 ಇವಿ ಸರಣಿ ಸ್ಕೂಟರ್ ಗಳ ಮೇಲೆ ಹಲವಾರು ಡಿಸ್ಕೌಂಟ್ ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಗರಿಷ್ಠ ರೂ. 25 ಸಾವಿರ ತನಕ ಆಫರ್ ನೀಡುತ್ತಿದ್ದು, ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.
ಹೊಸ ಆಫರ್ ಗಳಲ್ಲಿ ಓಲಾ ಕಂಪನಿಯು ಎಸ್1 ಪ್ರೊ ಜೆನ್ 2 ಆವೃತ್ತಿಯ ಮೇಲೆ ರೂ. 17 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ ನಂತರ ಎಸ್1 ಜೆನ್ 2 ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 1,29,999 ಬೆಲೆ ನಿಗದಿಪಡಿಸಲಾಗಿದೆ. ಹಾಗೆಯೇ ಎಸ್1 ಏರ್ ಆವೃತ್ತಿಯ ಮೇಲೆ ಓಲಾ ಕಂಪನಿಯು ರೂ. 15 ಸಾವಿರದಷ್ಟು ಆಫರ್ ನೀಡುತ್ತಿದ್ದು, ಆಫರ್ ನಂತರ ಎಸ್1 ಏರ್ ರೂ.1,04,999 ಬೆಲೆ ಹೊಂದಿದೆ.
ಇನ್ನು ಎಸ್1 ಏರ್ ಎಕ್ಸ್ ಪ್ಲಸ್ ಆವೃತ್ತಿಯ ಮೇಲೆ ಓಲಾ ಎಲೆಕ್ಟ್ರಿಕ್ ಕಂಪನಿಯು ಗರಿಷ್ಠ ರೂ. 25 ಸಾವಿರ ತನಕ ಆಫರ್ ನೀಡುತ್ತಿದ್ದು, ಹೊಸ ಆಫರ್ ನಂತರ ಎಸ್1 ಏರ್ ಎಕ್ಸ್ ಪ್ಲಸ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 84,999 ಬೆಲೆ ಪಡೆದುಕೊಂಡಿದೆ. ಇದರೊಂದಿಗೆ ಹೊಸ ಇವಿ ಸ್ಕೂಟರ್ ಗಳ ಮೇಲೆ ವಿಸ್ತರಿತ ವಾರಂಟಿ ಆಫರ್ ಸಹ ನೀಡಲಾಗಿದ್ದು, ಗ್ರಾಹಕರು 80 ಸಾವಿರ ಕಿ.ಮೀ ಅಥವಾ 8 ವರ್ಷಗಳ ವಾರಂಟಿ ಪಡೆದುಕೊಳ್ಳಬಹುದಾಗಿದೆ.
ಇದರೊಂದಿಗೆ ಇವಿ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಳೆದ ತಿಂಗಳು ಬರೋಬ್ಬರಿ 35 ಸಾವಿರ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಇವಿ ಸ್ಕೂಟರ್ ಮಾರುಕಟ್ಟೆಯ ಶೇ. 42 ಪಾಲನ್ನು ಓಲಾ ತನ್ನದಾಗಿಸಿಕೊಂಡಿದ್ದು, ಹೊಸ ಕೊಡುಗೆ ಗಳೊಂದಿಗೆ ಈ ತಿಂಗಳು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಎಸ್1 ಪ್ರೊ, ಎಸ್1 ಏರ್, ಎಸ್1 ಎಕ್ಸ್ ಪ್ಲಸ್, ಎಸ್1 ಎಕ್ಸ್(2ಕೆವಿಹೆಚ್), ಎಸ್1 ಎಕ್ಸ್(3ಕೆವಿಹೆಚ್) ಮತ್ತು ಎಸ್1 ಎಕ್ಸ್(4ಕೆವಿಹೆಚ್) ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮಾರಾಟ ಹೆಚ್ಚಳದೊಂದಿಗೆ ಸರ್ವಿಸ್ ಸೆಂಟರ್ ಗಳ ಸಂಖ್ಯೆಯನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿದೆ.
