ಅಯೋಧ್ಯೆ, 31 ಜನವರಿ:
ಆ್ಯಂಕರ್ :
ಉತ್ತರ ಪ್ರದೇಶದಲ್ಲಿನ ಪವಿತ್ರ ನಗರ ಅಯೋಧ್ಯೆಗೆ ಆಗಮಿಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮತ್ತು ನಗರಕ್ಕೆ ಸಂಪರ್ಕ ಹೆಚ್ಚಿಸುವ ಸಲುವಾಗಿ ನಾಗರಿಕ ವಿಮಾನ ಯಾನ ಸಚಿವಾಲಯವು ಫೆಬ್ರವರಿ ೧ ರಿಂದ ಎಂಟು ಹೊಸ ವಿಮಾನ ಸಂಚಾರ ಸೌಲಭ್ಯ ಒದಗಿಸಲು ಸಜ್ಜಾಗಿದೆ. ಈ ಹೊಸ ವಿಮಾನ ಮಾರ್ಗಗಳು ದೆಹಲಿ, ಚೆನ್ನೈ, ಅಹಮದಾಬಾದ್, ಜೈಪುರ್, ಪಾಟ್ನಾ, ದರ್ಭಾಂಗಾ, ಮುಂಬೈ ಮತ್ತು ಬೆಂಗಳೂರಿನಿಂದ ಅಯೋಧ್ಯೆಗೆ ಸಂಪರ್ಕ ಕಲ್ಪಿಸುತ್ತವೆ. ಅಯೋಧ್ಯೆಯ ರಾಮಮಂದಿರದಲ್ಲಿ ಇತ್ತೀಚೆಗೆ ನಡೆದ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಕಂಡುಬಂದ ಭಾರೀ ಬೇಡಿಕೆಯು ಅಯೋಧ್ಯೆಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಮಾತ್ರವಲ್ಲದೇ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಕಾರಣವಾಗುತ್ತಿದೆ. ವಿಮಾನಯಾನ ಸೇವೆಗಳನ್ನು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಉದ್ಘಾಟಿಸಲಿದ್ದು, ಸ್ಪೈಸ್ ಜೆಟ್ ಈ ಮಾರ್ಗಗಳಲ್ಲಿ ಹಾರಾಟ ನಡೆಸಲಿದೆ.
