ನವದೆಹಲಿ, :
ಸಿ ಎನ್ ಜಿ ಇಂಧನ ಚಿಲ್ಲರೆ ಮಾರಾಟ ದರ ಪ್ರತಿ ಕಿಲೋಗ್ರಾಂಗೆ ಎರಡು ರೂಪಾಯಿ ೫೦ ಪೈಸೆ ಕಡಿಮೆಯಾಗಿದೆ. ಇಂದು ಬೆಳಗ್ಗೆ ೬ ಗಂಟೆಯಿಂದ ಹೊಸ ದರ ಜಾರಿಯಾಗಲಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ, ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್, ಸಿ ಎನ್ ಜಿ ಯ ಪರಿಷ್ಕೃತ ಮಾರಾಟ ಬೆಲೆ ದೆಹಲಿಯಲ್ಲಿ ಪ್ರತಿ ಕಿಲೋಗ್ರಾಂಗೆ ೭೪ ರೂಪಾಯಿ ಮತ್ತು ೯ ಪೈಸೆ ಆಗಿದ್ದು, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್ನಲ್ಲಿ ಪ್ರತಿ ಕಿಲೋಗ್ರಾಂಗೆ ೭೮ ರೂಪಾಯಿ ೭೦ ಪೈಸೆ ಇರಲಿದೆ ಎಂದು ತಿಳಿಸಿದೆ.
