ಬೆಂಗಳೂರು, :
ಆ್ಯಂಕರ್:ಬಿಸಿಲ ಬೇಗೆ ಹೆಚ್ಚುತ್ತಿದೆ. ವಾತಾವರಣದ ತಾಪಮಾನ ಹೆಚ್ಚಾಗುತ್ತಿದೆ. ಮತ್ತೊಂದೆಡೆ ನೀರಿನ ಅಭಾವ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ಜನತೆ ಕುಡಿಯುವ ನೀರಿಗಾಗಿ ತಡಕಾಡುವ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜನರ ಸಂಕಷ್ಟಕ್ಕೆ ಸಂದಿಸುವ ಮೂಲಕ ನಿಜ ಜೀವನದಲ್ಲೂ ಹಿರೋ ಎಂದು ಸೈ ಎನಿಸಿಕೊಂಡಿದ್ದಾರೆ.
ಬೆಂಗಳೂರು ಕಳೆದ 2 ತಿಂಗಳಿನಿಂದ ನೀರಿನ ಬವಣೆ ಬಳಲುತ್ತಿದೆ. ಹೀಗಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನು ಗಮನಿಸಿದ ನಟ ಧ್ರುವ ಸರ್ಜಾ ನೀರಿಗಾಗಿ ಸಮಸ್ಯೆ ಹೆಚ್ಚಾಗ್ತಿದ್ದಂತೆ ಕೆಂಗೇರಿ ಸುತ್ತಮುತ್ತಲಿನ ಪ್ರದೇಶದ ಮನೆಗಳಿಗೆ ಉಚಿತ ಟ್ಯಾಂಕರ್ ನೀರಿನ ವ್ಯವಸ್ಥೆ ಕಲ್ಪಿಸಿದ್ದಾರೆ.
ನೀರಿನ ಅಭಾವದಿಂದ ಕಂಗೆಟ್ಟಿರುವ ಜನರಿಗಾಗಿ ಅಖಿಲ ಕರ್ನಾಟಕ ಧ್ರುವ ಸರ್ಜಾ ಅಭಿಮಾನಿಗಳ ಸಂಘದಿಂದ ನೀರು ಸರಬರಾಜು ಮಾಡಲಾಗಿದೆ. ಅತ್ತ ನಟನ ಈ ಮಹಾತ್ಕಾಯದಿಂದ ಜನರು ಸಂತೋಷಗೊಂದಿದ್ದಾರೆ. ನೆಚ್ಚಿನ ನಟ ಒಳ್ಳೆಯ ಕೆಲಸವನ್ನ ಕೊಂಡಾಡಿದ್ದಾರೆ.
