ದಕ್ಷಿಣ ಕೊರಿಯಾದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾದ ಕಿಯಾ ತನ್ನ ಬಹುನೀರಿಕ್ಷಿತ ಇವಿ3 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದ್ದು, ಮುಂದಿನ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗಲಿದೆ.
BulletsIn
- ಕಿಯಾ ತನ್ನ ಬಹುನೀರಿಕ್ಷಿತ ಇವಿ3 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅನಾವರಣಗೊಳಿಸಿದೆ.
- ಹೊಸ ಇವಿ ಕಾರು ದಕ್ಷಿಣ ಕೊರಿಯಾದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
- 2025ರ ಮಧ್ಯಂತರದ ವೇಳೆಗೆ ಯುರೋಪಿನ ಪ್ರಮುಖ ಮಾರುಕಟ್ಟೆಗಳು ಮತ್ತು ಭಾರತದಲ್ಲೂ ಬಿಡುಗಡೆಯಾಗುವ ನಿರೀಕ್ಷೆ ಇದೆ.
- ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 58.3kWh ಮತ್ತು 81.4kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ನೀಡಲಾಗುತ್ತಿದೆ.
- 58.3kWh ಬ್ಯಾಟರಿ ಆಯ್ಕೆಯು ಸ್ಟ್ಯಾಂಡರ್ಡ್ ವೆರಿಯೆಂಟ್ ಆಗಿರುತ್ತದೆ.
- 81.4kWh ಬ್ಯಾಟರಿ ಪ್ಯಾಕ್ ಲಾಂಗ್ ರೇಂಜ್ ವೆರಿಯೆಂಟ್ ಆಗಿರುತ್ತದೆ.
- ಇವಿ3 ಕಾರು E-GMP ಮಾಡ್ಯೂಲರ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ನಿರ್ಮಿತವಾಗಿದೆ.
- ಪ್ರತಿ ಚಾರ್ಜ್‌ಗೆ ಗರಿಷ್ಠ 600 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಆಯ್ಕೆಯಿದೆ.
- 400V ಆರ್ಕಿಟೆಕ್ಚರ್ ಹೊಂದಿದ್ದು, ಪುನರುತ್ಪಾದಕ ಬ್ರೇಕಿಂಗ್‌ಗಾಗಿ ಪ್ಯಾಡಲ್ ಶಿಫ್ಟರ್ ಹೊಂದಿದೆ.
- ವೆಹಿಕಲ್ ಟು ವೆಹಿಕಲ್ (V2L) ತಂತ್ರಜ್ಞಾನ ಮೂಲಕ ಚಾರ್ಜಿಂಗ್ ಸೌಲಭ್ಯವನ್ನು ಕೂಡ ತೆಗೆದುಕೊಳ್ಳಬಹುದು.
- ಶೇ. 10 ರಿಂದ 80 ರಷ್ಟು ಚಾರ್ಜ್ ಆಗಲು ಕೇವಲ 31 ನಿಮಿಷಗಳನ್ನು ತೆಗೆದುಕೊಳ್ಳುವ ಸೂಪರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.
