ಬಳ್ಳಾರಿ, 6 ಮಾರ್ಚ್
ಆ್ಯಂಕರ್ : ಪುನೀತ್ ರಾಜ್ಕುಮಾರ್ ಅವರ ಜನ್ಮದಿನ ಸಮೀಪಿಸಿದೆ. ಮಾರ್ಚ್ 17ರಂದು ಅದ್ದೂರಿಯಾಗಿ ಪುನೀತ್ ಜನ್ಮದಿನ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅಂದು ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿವೆ. ಈ ಮಧ್ಯೆ ಪುನೀತ್ ಅಭಿಮಾನಿಯೊಬ್ಬರು ಕಥೆ ಇರುವ ಚಲನಚಿತ್ರದ ಟ್ರೇಲರ್ ನ ಮಾರ್ಚ್ 17ರಂದು ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮೂಲಕ ಪುನೀತ್ ಮೇಲಿನ ಅಭಿಮಾನ ಮೆರೆಯಲು ತಂಡ ಮುಂದಾಗಿದೆ.
‘ರತ್ನ’ ಚಿತ್ರವನ್ನು ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಾಯಕಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಆಗಿರುತ್ತಾಳೆ ಅನ್ನೋದು ವಿಶೇಷ. ಅಪ್ಪು ಅಭಿಮಾನಿಯ ಸುತ್ತ ಈ ಚಿತ್ರದ ಕಥೆ ಸಾಗಲಿದೆ ಎಂದು ತಂಡ ಮಾಹಿತಿ ನೀಡಿದೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ ಬಸವರಾಜ್ ಬಳ್ಳಾರಿ. ಇದರ ಜೊತೆಗೆ ಗೀತರಚನೆ ಕೂಡ ಅವರದ್ದೇ. ಸತೀಶ್ ಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ಗಂಗಾವತಿ ಛಾಯಾಗ್ರಹಣ ಸಿನಿಮಾಗೆ ಇದೆ. ನಾಗೇಂದ್ರ ಅರಸ್ ಅವರ ಸಂಕಲನ ಇರುವ ಈ ಚಿತ್ರಕ್ಕೆ ಮಂಜುನಾಥ್ ಎಂ ಹಾಗೂ ರಾಘವೇಂದ್ರ ಕರೂರ್ ಸಹ ನಿರ್ಮಾಪಕರು.
