ಲಾಹೋರ್, 3 ಮಾರ್ಚ್:
ಭಾರತದ ಅತ್ಯಂತ ಬೇಕಾಗಿರುವ ಉಗ್ರ ಶೇಖ್ ಜಮೀಲ್-ಉರ್-ರೆಹಮಾನ್ ಪಾಕಿಸ್ತಾನದಲ್ಲಿ ನಿಗೂಢವಾಗಿ ಕೊಲೆಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಕಮಾಂಡರ್ ಖೈಬರ್ ಪಖ್ತುಂಖ್ವಾದ ಅಬೋಟಾಬಾದ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಯುನೈಟೆಡ್ ಜಿಹಾದ್ ಕೌನ್ಸಿಲ್ ನ ಸ್ವಯಂ-ಘೋಷಿತ ಪ್ರಧಾನ ಕಾರ್ಯದರ್ಶಿ ರೆಹಮಾನ್ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದವನು.
